ಬೆಂಗಳೂರು ಮಾ.14 : ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಪತ್ನಿ ಪರಿಮಳ, ಪುತ್ರ ಯತಿರಾಜ್ ಜೊತೆಗಿದ್ದರು. ಮೋದಿ ಅವರಿಗೆ ಮಂತ್ರಾಲಯದ ರಾಯರ ಮೂರ್ತಿ ನೀಡಿದ ಜಗ್ಗೇಶ್ ಮಾರ್ಚ್ 17 ನನ್ನ ಜನ್ಮ ದಿನವಾಗಿದ್ದು, ಆಶೀರ್ವಾದ ಮಾಡುವಂತೆ ಕೋರಿದರು. 60 ವಸಂತ ಪೂರ್ಣಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ವಿಶ್ವ ನಾಯಕ ಪ್ರಧಾನಿ ನರೇಂದ್ರಮೋದಿ ಅವರಿಂದ ಆಶೀರ್ವಾದ ಪಡೆದು ಪುನೀತನಾದೆ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಜಗ್ಗೇಶ್ ಹರ್ಷ ಹಂಚಿಕೊಂಡಿದ್ದಾರೆ.
















