ಕುಶಾಲನಗರ, ಮಾ.18 : ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವಾಲಯದಲ್ಲಿ 10ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಅರ್ಚಕರಾದ ರಾಘವೇಂದ್ರ ಆಚಾರ್, ಪದ್ಮನಾಭ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.
ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊಂದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.
ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಧನರಾಜ್, ಕಾರ್ಯದರ್ಶಿ ಅಣ್ಣೇಗೌಡ, ಸಹ ಕಾರ್ಯದರ್ಶಿ ಎಂ. ಮಂಜುನಾಥ್, ಖಜಾಂಚಿ ಎಂ.ಕೆ.ಗಣೇಶ್ , ಪ್ರಮುಖರಾದ ಎಂ.ಸಿ.ಮಂಜುನಾಥ್, ಎಂ.ಆರ್. ಸೋಮಶೇಖರ್, ಡಿ.ಅಪ್ಪಣ್ಣ ಮತ್ತಿತರರು ಇದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯ ಆಡಳಿತ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.









