ನಾಪೋಕ್ಲು ಮಾ.18 : ನಾಪೋಕ್ಲು ಪಟ್ಟಣದಿಂದ ಕೊಡವ ಸಮಾಜ ಹೋಗುವ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬ ಹಾನಿಯಾಗಿ ಮುರಿದು ಬೀಳುವ ಹಂತಕ್ಕೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಈ ರಸ್ತೆಯಲ್ಲಿ ಹಲವಾರು ವಾಹನಗಳು, ಸಾರ್ವಜನಿಕರು,ಶಾಲಾ ಮಕ್ಕಳು, ಇದರ ಬದಿಯಲ್ಲೇ ನಡೆದುಕೊಂಡು ಹೋಗುತ್ತಿದ್ದು, ವಿದ್ಯುತ್ ಕಂಬ ತುಂಡಾಗಿ ಬಿದ್ದರೆ ಭಾರಿ ಅನಾಹುತ ಸಂಭವಿಸುವ ಪರಿಸ್ಥಿತಿ ಎದುರಾಗಲಿದೆ.
ಇದೇ ರಸ್ತೆಯಲ್ಲಿ ಸೆಸ್ಕ್ ಲೈನ್ ಮ್ಯಾನ್ ಗಳು ಪ್ರತಿನಿತ್ಯ ಓಡಾಡುತ್ತಿದ್ದರು ಇಲ್ಲಿರುವ ವಿದ್ಯುತ್ ಕಂಬ ಹಾನಿಯಾಗಿ ಬೀಳುವ ಹಂತದಲ್ಲಿದ್ದರು ದುರಸ್ಥಿಪಡಿಸದೇ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ದುರದೃಷ್ಟಕರ ಎಂದು ಸಾರ್ವಜನಿಕರು ದೂರಿದ್ದಾರೆ.
ಇದೇ ರೀತಿ ನಾಪೋಕ್ಲು ಸುತ್ತಮುತ್ತಲಿನಲ್ಲಿ ಹಲವಾರು ಹಳೆಯ ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಹೆಚ್ಚಿನ ಅಪಾಯ ಎದುರಾಗುವ ಮುನ್ನ ಎಚ್ಚೆತ್ತುಕೊಂಡು ಸೆಸ್ಕ್ ಇಲಾಖೆ ಅಧಿಕಾರಿಗಳು ಕೂಡಲೇ ಇದನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ವರದಿ :ಝಕರಿಯ ನಾಪೋಕ್ಲು








