ಮಡಿಕೇರಿ ಮಾ.21 : ಮುಂದಿನ ಸಾಲಿಗೆ ಒಟ್ಟು 73,13,48,792 ರೂಪಾಯಿ ಗಾತ್ರದ ಆಯವ್ಯಯವನ್ನು ನಗರಸಭೆ ಅಧ್ಯಕ್ಷತೆ ನೆರವಂಡ ಅನಿತಾ ಪೂವಯ್ಯ ಮಂಡಿಸಿ ಅನುಮೋದನೆ ಪಡೆದುಕೊಂಡರು.
ನಗರಸಭೆ ಸಭಾಂಗಣದಲ್ಲಿ ನಡೆದ ಆಯವ್ಯಯ ಅಂದಾಜುಪಟ್ಟಿಯನ್ನು ಅಧ್ಯಕ್ಷೆ ಸಭೆಯ ಮುಂದಿಟ್ಟು ಅಭಿವೃದ್ಧಿ ಕಾರ್ಯದ ಬಗ್ಗೆ ವಿವರಿಸಿದರು.
2023-24ನೇ ಸಾಲಿನಲ್ಲಿ ಆರಂಭ ಶಿಲ್ಕು 12,09,89,630 ರೂಪಾಯಿ ಹೊಂದಿದ್ದು, ರೂ.61,03,59,162 ಸ್ವೀಕೃತಿಯೊಂದಿಗೆ ರೂ.73,13,48,792 ನಿರೀಕ್ಷಿತ ಆಯವ್ಯಯವನ್ನು ಸಿದ್ಧಪಡಿಸಲಾಗಿದೆ.
ಈ ಪೈಕಿ ರೂ.66,88,08,000 ವೆಚ್ಚವಾಗಲಿದ್ದು, 6,25,40,792 ರೂಪಾಯಿ ಉಳಿಕೆಯಾಗಲಿದೆ ಎಂದು ಮಾಹಿತಿ ಒದಗಿಸಿದರು.
ನಗರಸಭೆಯ ಸ್ವಂತ ಮೂಲಗಳಿಂದ ಬರುವ ನಿರೀಕ್ಷಿತ ಆದಾಯದ ಬಗ್ಗೆ ವಿವರಿಸಿದ ಅನಿತಾ ಪೂವಯ್ಯ, ಆಸ್ತಿ ತೆರಿಗೆ, ದಂಡಗಳಿಂದ ರೂ.3.85 ಕೋಟಿ, ನೀರಿನ ಶುಲ್ಕ ಠೇವಣಿಯಿಂದ ರೂ.96.50 ಲಕ್ಷ ಮಳಿಗೆಗಳ ಬಾಡಿಗೆಯಿಂದ ರೂ.1.25 ಕೋಟಿ, ರಾಜಾಸೀಟ್ ಹಾಗೂ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗಳ ಹಾರಾಜಿನಿಂದ ರೂ.50 ಲಕ್ಷ, ಉದ್ದಿಮೆ ಸೇರಿದಂತೆ ಇತರ ಪರವಾನಗಿಯಿಂದ ರೂ.81 ಲಕ್ಷ, ಕಟ್ಟಡ ಪರವಾಗಿ, ಅಭಿವೃದ್ಧಿ ಶುಲ್ಕದಿಂದ ರೂ.50 ಲಕ್ಷ, ವಾಹನ ನಿಲುಗಡೆ ರೂ. 10 ಲಕ್ಷ, ಮಾರುಕಟ್ಟೆ ಶುಲ್ಕ ರೂ. 25 ಲಕ್ಷ ನೆಲಬಾಡಿಗೆ ರೂ.25 ಲಕ್ಷ, ಘನತ್ಯಜ್ಯ ನಿರ್ವಹಣಾ ಶುಲ್ಕ ರೂ.3.80 ಲಕ್ಷ, ಸಕ್ಕಿಂಗ್ ವಾಹನಗಳ ಬಾಡಿಗೆ ರೂ.15 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಯಿಂದ ರೂ.22 ಲಕ್ಷ, ಬ್ಯಾಂಕ್ ಖಾತೆಗಳಿಂದ ಬರುವ ಬಡ್ಡಿ ರೂ.7.50 ಲಕ್ಷ, ಸ್ಪ್ಯಾಂಪ್ ಶುಲ್ಕ ರೂ.2 ಲಕ್ಷ, ಜಾಗೀರಾತು ತೆರಿಗೆ ರೂ.5 ಲಕ್ಷ, ನೌಕರರಿಂದ ವಸೂಲಾತಿಗಳು 1.25 ಕೋಟಿ ಸೇರಿದಂತೆ ಇನ್ನಿತರ ಮೂಲಗಳಿಂದ ಒಟ್ಟು 21,84,20,000 ಆದಾಯ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
ರಾಜ್ಯ ಹಾಗೂ ಕೇಂದ್ರ ಸರಕಾರದಿಂದ 15ನೇ ಹಣಕಾಸು ಅನುದಾನದಲ್ಲಿ ರೂ.3 ಕೋಟಿ, ಎಸ್.ಎಫ್.ಸಿ ಮುಕ್ತನಿಧಿ ರೂ.75 ಲಕ್ಷ, ಎಸ್.ಎಫ್.ಸಿ ವೇತನ ಅನುದಾನ ರೂ.5.23 ಕೋಟಿ, ವಿದ್ಯುತ್ ಅನುದಾನ ರೂ.4.58 ಕೋಟಿ, ಮಳೆಹಾನಿ ಅನುದಾನ ರೂ.50 ಲಕ್ಷ, ಕುಡಿಯುವ ನೀರಿನ ಅನುದಾನ ರೂ.10 ಲಕ್ಷ, ವಿಶೇಷ ಅನುದಾನ ರೂ.1 ಕೋಟಿ, ಶಾಸಕರ ಅನುದಾನ ರೂ.2.50 ಕೋಟಿ ಸೇರಿದಂತೆ ವಿವಿಧ ಮೂಲಗಳಿಂದಲೂ ಅನುದಾನ ನಗರಸಭೆಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಮುಖ ವೆಚ್ಚಗಳು : ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ.95 ಲಕ್ಷ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ರೂ.50 ಲಕ್ಷ, ಸಮುದಾಯ ಭವನ ಕಾಮಗಾರಿ ರೂ.25 ಲಕ್ಷ, ರಸ್ತೆ, ತಡೆಗೋಡೆ, ಚರಂಡಿ ಅಭಿವೃದ್ಧಿಗೆ ರೂ.6 ಕೋಟಿ, ಸೇತುವೆ ಕಾಮಗಾರಿ ರೂ. 25 ಲಕ್ಷ, ತ್ಯಾಜ್ಯ ನಿರ್ವಹಣೆ ರೂ.5.10 ಕೋಟಿ, ಕೆರೆಗಳ ಅಭಿವೃದ್ಧಿ ರೂ.3.20 ಕೋಟಿ ಸೇರಿದಂತೆ ಇನ್ನೂ ಹಲವು ಕಾರ್ಯಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ತಗುಲಲಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.













