ಮಡಿಕೇರಿ ಮಾ.26 : ಇನ್ನರ್ ವೀಲ್ ಸಂಸ್ಥೆ ವತಿಯಿಂದ ನಗರದ ಅಂಗನವಾಡಿಯ ಮಕ್ಕಳಿಗೆ ಕುಳಿತುಕೊಳ್ಳಲು ಜಮಖಾನ ಕೊಡುಗೆಯಾಗಿ ನೀಡಲಾಯಿತು.
ನಗರದ ರೈಫಲ್ ರೇಂಜ್ ನಲ್ಲಿರುವ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಳಿತುಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಉಪಯೋಗವಾಗುವಂಥ ಜಮಖಾನವನ್ನು ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನೀಡಲಾಯಿತು.
ಈ ಸಂದರ್ಭ ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ನಿರ್ದೇಶಕಿಯರಾದ ಉಮಾಗೌರಿ, ಮಲ್ಲಿಗೆ ಪೈ, ಗುಲಾಬಿ ಜನಾರ್ಧನ್ ಹಾಜರಿದ್ದರು.










