ಮಡಿಕೇರಿ ಮಾ.26: ದೆಹಲಿಯಲ್ಲಿ ಕರ್ನಾಟಕ ಕನ್ನಡ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆದ “ಬಾರಿಸು ಕನ್ನಡ ಡಿಂಡಿಮ” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಶಾಲನಗರ ಕುಂದನ ನೃತ್ಯಾಲಯದ ಮಕ್ಕಳು ಪ್ರದರ್ಶಿಸಿದ ನೃತ್ಯ ಪ್ರದರ್ಶನ ಕಲಾ ರಸಿಕರ ಮನ ಸೆಳೆಯಿತು.
ನೃತ್ಯ ವಿದುಷಿ ವಿನುತ ಹೇಮಂತ್ ನೇತೃತ್ವದಲ್ಲಿ ಪ್ರದರ್ಶಿಸಿದ ನಂತರ “ಕೊಡಗಿನ ಸಂಭ್ರಮ” ಎಂಬ ನೃತ್ಯ ರೂಪಕವು ದೆಹಲಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು. ಕೊಡಗಿನ ಇತಿಹಾಸ ಹಾಗೂ ಆಚರಣೆಗಳ ಕುರಿತು 30 ನಿಮಿಷಗಳ ಕಾಲ ಪ್ರದರ್ಶಿಸಿದ ಮಕ್ಕಳ ನೃತ್ಯ ರೂಪಕವು ಕೊಡಗಿನ ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ಆಕರ್ಷಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದೆಹಲಿ ಕರ್ನಾಟಕ ಸಂಘದ ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಲಾ ಪ್ರತಿಭೆಗೆ ಉತ್ತಮ ವೇದಿಕೆಯಾಗಿತ್ತು ಎಂದು ನೃತ್ಯ ವಿದೂಷಕಿ ವಿನುತ ಅಭಿಪ್ರಾಯಪಟ್ಟರು.
ರಶ್ಮಿ, ಮೋನಿಕ, ಸ್ಪಂದನ, ತನಿಷ, ಡಿ.ಎಚ್.ಖುಷಿ, ಆಲಿಯ, ನಿಷ್ಮಯ್, ತಸ್ಮಿ, ಧನ್ಯಶ್ರೀ, ಪ್ರಗನ್ಯ, ದಿಯಾ, ಸವಿತ, ಲಕ್ಷಿö್ಮ, ಯಶಸ್ವಿನಿ ಸೇರಿದಂತೆ ಇತರ ನೃತ್ಯಪಟುಗಳು ಪ್ರದರ್ಶಿಸಿದ ನೃತ್ಯ ರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ರೂಪಕ ಪ್ರದರ್ಶಿಸಿದ ಮಕ್ಕಳಿಗೆ ದೆಹಲಿ ಕನ್ನಡ ಸಂಘದ ವತಿಯಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು.











