ಮಡಿಕೇರಿ ಮಾ.27 : ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಾವಾಗುತ್ತಿರುವ (ಐಟಿಡಿಪಿ ವಸತಿ ನಿಲಯ, ಕಸ ವಿಲೇವಾರಿ ಘಟಕ, ಡಿಜಿಟಲ್ ಲೈಬ್ರರಿ, ನೂತನ ಅಂಗನವಾಡಿ, ರಸ್ತೆಗಳು, ಸೇತುವೆ) ಕಾಮಗಾರಿ ಶಾಸಕ ಕೆ.ಜಿ.ಬೋಪಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ಸಂದರ್ಭ ಪೂರ್ಣಗೊಂಡ ಕಾಮಗಾರಿಯನ್ನು ಉದ್ಘಾಟಿಸಿದರು.
ನಂತರ ಸಭಾ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿ, ಗೌರವಿಸಿದರು.








