ಮಡಿಕೇರಿ ಏ.3 : ಮನೆಯೊಂದರ ಮೇಲೆ ಸೋಮವಾರಪೇಟೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 300 ಲೀಟರ್ ಬೆಲ್ಲದ ಪುಳಿಗಂಜಿ ಹಾಗೂ 10 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಚನ್ನಾಪುರ ಗ್ರಾಮ ನಿವಾಸಿ ನಂಜುಂಡಶೆಟ್ಟಿ ಎಂಬವರ ಪುತ್ರ ಚಂದ್ರಶೇಖರ್ ಆರೋಪಿ. ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆರ್.ಎಂ.ಚೈತ್ರಾ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಪೇದೆಗಳಾದ ಎ.ಪಿ.ವೀರೇಶ್ ಕುಮಾರ್, ಮಹಾದೇವ ಗಡ್ಡಿ, ಕಾಂತರಾಜ್ ಪಾಲ್ಗೊಂಡಿದ್ದರು.