ನಾಪೋಕ್ಲು ಏ.4 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನಸಂಘದ ವತಿಯಿಂದ ಏ.7 ರಂದು ಮಳೆಗಾಗಿ ಪರ್ಜನ್ಯ ಹೋಮ ನಡೆಯಲಿದೆ.
ನಾಡಿನ ಸುಭೀಕ್ಷೆಗಾಗಿ ಮಳೆ ಬೆಳೆಗಳ ವರದಾತ ರೋಗ ನಿವಾರಕ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರಿಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರಿಂದ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ.
ದೇವಾಲಯದಲ್ಲಿ ಬೆಳಿಗ್ಗೆ ಏಳರಿಂದ ಎಂಟು ಗಂಟೆಯವರೆಗೆ ಅಭಿಷೇಕ ಪೂಜೆ, ಬಳಿಕ ಪರ್ಜನ್ಯ ಹೋಮ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ನಿತ್ಯ ಮಹಾಪೂಜೆ ಜರುಗಲಿದೆ.
ದೇವಾಲಯಕ್ಕೆ ಒಳಪಟ್ಟ ಪಾಡಿನಾಡಿನ ಎಲ್ಲ ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘದ ಪದಾಧಿಕಾರಿಗಳು, ಕೊಡಗಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಪರದಂಡ ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ : ದುಗ್ಗಳ ಸದಾನಂದ

















