ಮಡಿಕೇರಿ ಏ.6 : ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯ ವತಿಯಿಂದ ನೂತನ ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ. ಅಶೋಕ ಸಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಾಯಿ ಶಂಕರ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಕೋಳೇರ ಝರು ಗಣಪತಿ, ಟ್ರಸ್ಟಿ ಗಾನ ಕಾರ್ಯಪ್ಪ, ಬಿ.ಇಡಿ ಪದವಿ ಕಾಲೇಜಿನ ಪ್ರಾಂಶುಪಾಲ ಪಿ.ಎ.ನಾರಾಯಣ್, ಪದವಿ ಕಾಲೇಜು ಪ್ರಾಂಶುಪಾಲ ಟಿ.ಸಿ.ಗೀತಾ ನಾಯ್ಡು ಹಾಗೂ ಸಿಬ್ಬಂದಿ ಮಂದಣ್ಣ ಹಾಜರಿದ್ದರು.