ಮಡಿಕೇರಿ ಏ.7 : ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಮಂಥರ್ ಗೌಡ ಅವರ ಹೆಸರು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಮಂತರ್ ಗೌಡ ಅವರ ಪ್ರಭುದ್ಧ ಅಭಿವೃದ್ಧಿ ಯೋಚನೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗು ಸಂಪ್ರಾದಾಯಿಕ ಕೃಷಿ ಆಧಾರಿತ ನಾಡು, ಕೃಷಿ ಬಿಕಟ್ಟು ಇಲ್ಲಿನ ಜನತೆಗೆ ತೊಂದರೆ ಮಾಡಿದೆ. ಯುವಕರನ್ನು ಅತಂತ್ರವಾಗಿ ಹೊರ ಜಿಲ್ಲೆಗಳಿಗೆ ತೆರಳುವಂತೆ ಮಾಡಿದೆ ಎಂದರು.
ಡಾ. ಮಂಥರ್ ಗೌಡ ಅವರ ಯೋಚನೆ ಹಾಗೂ ಯೋಜನೆಗಳು ಭವಿಷ್ಯದ ಕೊಡಗನ್ನು ನಿರ್ಮಿಸಲು ಹೊರಟಿರುವ ಯೋಜನೆಗಳಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಕೊಡಗಿನ ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯ ಒಗಿಸಲು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಕೊಡಗಿನ ಭತ್ತದ ತಳಿಗಳ ಸಂರಕ್ಷಣೆ, ಪ್ರಾಕೃತಿಗೆ ಹಾನಿ ಮಾಡದ ರೀತಿಯಲ್ಲಿ ಸುಸ್ಥಿತ ಪ್ರವಾಸೋದ್ಯಮ, ವಿವಿಧ ತಳಿಯ ತರಕಾರಿಗಳನ್ನು ಬೆಳೆದು ಆಧುನಿಕ ಮಾರುಕಟ್ಟೆಯಲ್ಲಿ ಗಮನ ಸೆಳೆಯುವುದು, ಕಾಡಂಚಿನಲ್ಲಿ ವಾಸಿಸುತ್ತಿರುವ ಹಾಗೂ ಆದಿವಾಸಿ ಕುಟುಂಬಗಳ ಬೆಳವಣಿಗೆಗೆ ನಿಖರವಾದ ಕಾರ್ಯಕ್ರಮ ಅನುಷ್ಠಾನದ ಯೋಜನೆಯನ್ನು ಹೊಂದಿದ್ದಾರೆ.
ಅಲ್ಲದೆ ಉದ್ಯೋಗ ಸೃಷ್ಟಿಸುವುದು, ಕಾರ್ಮಿಕರ ಕಲ್ಯಾಣಕ್ಕೆ ಅಗತ್ಯ ಕಾರ್ಯಕ್ರಮ ಹಾಗೂ ಪ್ರತಿಯೊಂದು ಕ್ಷೇತ್ರದ ಬಗ್ಗೆ ವಿಭಿನ್ನ ಆಧುನಿಕ ಚಿಂತನೆಗಳನ್ನು ಹೊಂದಿದ್ದಾರೆ ಎಂದರು.
2023ರ ಸಾರ್ವತ್ರಿಕ ಚುನಾವಣೆ ಅಭಿವೃದ್ಧಿ ಮತ್ತು ಬದಲಾವಣೆ ಎಂಬ ಘೋಷಣೆಯೊಂದಿಗೆ ನಡೆಯಲಿದ್ದು, ಕೊಡಗಿನ ಜನತೆ ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಜಿಲ್ಲಾ ಕಾರ್ಯದರ್ಶಿ ಜನಾರ್ಧನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸುನಿಲ್ ಪತ್ರಾವೋ, ಮೂಡಾ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.









