ಮಡಿಕೇರಿ ಏ.8 : ಕೊಡಗು ಜಿಲ್ಲೆಯಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ಸ್ತ್ರೀಶಕ್ತಿ ಸಂಘಟನೆಯ ಜಿಲ್ಲಾ ಒಕ್ಕೂಟದ ಸಹಯೋಗದಲ್ಲಿ ಏ.30 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ರಂಗೋಲಿ ಸ್ಪಧೆ೯ಯನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷೆ ರೆಹನಾ ಸುಲ್ತಾನ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಗಾಂಧಿ ಮೈದಾನದಲ್ಲಿ 18 ವಷ೯ ಮೇಲ್ಪಟ್ಟ ಮಹಿಳೆಯರಿಗಾಗಿ ಪುಡಿ ರಂಗೋಲಿ ಮತ್ತು ಪುಪ್ಪ ರಂಗೋಲಿ ವಿಭಾಗಗಳಲ್ಲಿ ಸ್ಪಧೆ೯ ಆಯೋಜಿಸಲಾಗಿದೆ. ಮತದಾನದ ಮಹತ್ವ ಸಾರುವ ವಿಷಯದಲ್ಲಿಯೇ ವಿಭಿನ್ನವಾಗಿ ರಂಗೋಲಿ ಮೂಡಿಬರಬೇಕು. ಸ್ಪಧಿ೯ಗಳು ಏ.30 ರಂದು ಬೆಳಗ್ಗೆ 10 ಗಂಟೆಯೊಳಗೆ ಗಾಂಧಿ ಮೈದಾನದ ಸ್ಪಧಾ೯ ಸ್ಥಳದಲ್ಲಿಯೇ ಹೆಸರು ನೋಂದಾಯಿಸಬೇಕು.