ಮಡಿಕೇರಿ ಏ.9 : ಹಾಕತ್ತೂರು-ಬಿಳಿಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಬಾವ (ಖ.ಸಿ) ಅವರ ಹೆಸರಿನಲ್ಲಿ ಮೇ 7, 8 ಮತ್ತು 9 ರಂದು ನಡೆಯಬೇಕಾಗಿದ್ದ ಉರೂಸ್ ನ್ನು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಮುoದೂಡಲ್ಪಟ್ಟ ಉರೂಸ್ ಮೇ 14, 15 ಮತ್ತು 16 ರಂದು ಉಲಮಾ-ಉಮಾರ, ಸಾದತುಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಬದರ್ ಜಮಾಅತ್ ಸಮಿತಿ ಕಾರ್ಯದರ್ಶಿ ಎಸ್.ಎ.ಅಬ್ದುಲ್ ಖಾದರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 93538 34014 ನ್ನು ಸಂಪರ್ಕಿಸಬಹುದಾಗಿದೆ.








