ಮಡಿಕೇರಿ ಏ.10 : ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳು ರಾಜಕೀಯ ಪಕ್ಷಗಳ ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ಆರೋಪಿಸಿರುವ ಹೊದ್ದೂರು ಗ್ರಾ.ಪಂ ಸದಸ್ಯ ಕೆ.ಎಂ.ಮೊಯ್ದು ಕೊಟ್ಟಮುಡಿ, ಸರ್ವಜನರ ಹಿತ ಕಾಯುವುದಕ್ಕಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 70 ವರ್ಷಗಳಿಂದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಮತ ನೀಡುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನವನ್ನು ನೀಡಿಲ್ಲ ಎಂದು ಟೀಕಿಸಿದರು.
ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಪಕ್ಷದವರು ವಿಧಾನಸಭೆ ಮತ್ತು ವಿಧಾನ ಪರಿಷತ್ ಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲ. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಕೂಡ ನೀಡಿಲ್ಲ. ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿಲ್ಲ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 45 ಸಾವಿರಕ್ಕೂ ಅಧಿಕ ಮತದಾರರು ಅಲ್ಪಸಂಖ್ಯಾತರೇ ಆಗಿದ್ದಾರೆ. ಆದರೆ ಯಾವ ರಾಜಕೀಯ ಪಕ್ಷದಿಂದಲೂ ಯಾವುದೇ ರೀತಿಯ ಲಾಭವಾಗಿಲ್ಲ. ಆದ್ದರಿಂದ ಎಲ್ಲಾ ಸಮುದಾಯದವರ ಅಭಿಪ್ರಾಯ ಮತ್ತು ಬೆಂಬಲ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇನೆ. ನನ್ನ ಗೆಲುವಿನಿಂದ ವಿರಾಜಪೇಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದರು.
ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯನಾಗಿ ಜನಪರವಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಭ್ರಷ್ಟಾಚಾರ ರಹಿತವಾಗಿ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತೇನೆ. ಸೌಹಾರ್ದತೆಯ ವಾತಾವರಣಕ್ಕೆ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದ ಮೊಯ್ದು, ವಿರಾಜಪೇಟೆ ಕ್ಷೇತ್ರದ ಎಲ್ಲಾ ಸಮುದಾಯಗಳ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೊಯ್ದು ಬೆಂಬಲಿಗರಾದ ಎಂ.ಎ.ರಾಶೀದ್, ವಿ.ಎ.ಬದ್ರುದ್ದೀನ್, ಕೆ.ಪಿ.ಹ್ಯಾರಿಸ್ ಹಾಗೂ ಕೆ.ಎಸ್.ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ*
- *ಸೋಮವಾರಪೇಟೆ : ಇಂದಿರಾ ಕ್ಯಾಂಟೀನ್ ಕಾಮಗಾರಿ ಅಪೂರ್ಣ : ಅಸಮಾಧಾನ*
- *ಡಿಜಿಟಲ್ ಸಾಕ್ಷರತೆ ಮಹಿಳೆಯರ ಬದುಕಿಗೆ ಸಹಕಾರಿಯಾಗಲಿದೆ : ಆನಂದ್ ಪ್ರಕಾಶ್ ಮೀನಾ*
- *ಸೋಮವಾರಪೇಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ*
- *ಸುಂಟಿಕೊಪ್ಪ : ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರಿಗೆ ಶಿಕ್ಷೆ*
- *ಮಡಿಕೇರಿ : ನ.22 ರಂದು ಉದ್ಯೋಗ ಮೇಳ*
- *ನ.20 ರಂದು ಶಾಂತಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿ : ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ : ಸಮವಸ್ತ್ರ ವಿತರಣೆ*
- *ರಾಷ್ಟ್ರೀಯ ಐಕ್ಯತಾ ದಿನ : ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ*
- *ಮಡಿಕೇರಿಯಲ್ಲಿ ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ*