ಸುಂಟಿಕೊಪ್ಪ,ಏ.10: ಹರದೂರು ಗ್ರಾಮದ ಶ್ರೀ ಆದಿನಾಗಬಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಶ್ರೀ ಆದಿನಾಗಬಹ್ಮ ಮೊಗೇರ್ಕರ ದೈವಗಳ ಕೊರಗ ತನಿಯ ದೈವದ 83ನೇ ನೇಮೋತ್ಸವವು ಏ.15 ಮತ್ತು 16ರಂದು ನಡೆಯಲಿದೆ.
ಏ.15 ರಂದು ಮದ್ಯಾಹ್ನ 12 ಗಂಟೆಗೆ ಆಯುಧಾ ಪೂಜೆ, ಸಂಜೆ 6 ಗಂಟೆಗೆ ಮಂತ್ರವಾದಿ ಗುಳಿಗನ ನೇಮ, ರಾತ್ರಿ 8.30 ಗಂಟೆಗೆ ಶ್ರೀ ಆದಿನಾಗಬಹ್ಮ ಮೊಗೇರ ದೈವಗಳ ಗರಡಿ ಇಳಿಯುವುದು, ರಾತ್ರಿ 12.30 ಗಂಟೆಗೆ ಆದಿ ಮಾಯೆ ತನ್ನಿ ಮಾನಿಗ ಗರಡಿ ಇಳಿಯುವುದು.
ಏ.16 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಕೊರಗ ದೈವದ ನೇಮ ನಡೆಯಲಿದೆ ಎಂದು ಶ್ರೀ ಆದಿನಾಗಬಹ್ಮ ಮೊಗೇರ್ಕಳ ಸೇವಾ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.









