ಮಡಿಕೇರಿ ಏ.12 : ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸರ್ಕಾರದಿಂದ ಕೊಡಮಾಡುವ ಸಹಾಯಧನ ಮತ್ತು ಪ್ರಶಸ್ತಿಗಳನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಕೊಡವ ಭಾಷಾ ಚಲನಚಿತ್ರಗಳನ್ನು ನಿರ್ಮಿಸುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ಭಾಷಾ ಚಲನಚಿತ್ರ ನಿರ್ದೇಶಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷಾ ಬೆಳವಣಿಗೆಗೆ ಪೂರಕವಾಗಿ ಕೊಡವ ಭಾಷೆಯ ಚಲನಚಿತ್ರಗಳನ್ನು ನಿರ್ಮಿಸಬೇಡಿ ಎನ್ನುವುದಿಲ್ಲ. ಆದರೆ, ಇಲ್ಲಿನ ಮೂಲ ಸಂಸ್ಕೃತಿಗಳ ಅರಿವಿಲ್ಲದೆ, ಕೇವಲ ಕೊಡವ ಭಾಷೆ ಆಧರಿಸಿ ನಿರ್ಮಿಸುವ ಚಲನ ಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆಗಳನ್ನು ಮೂಡಿಸುತ್ತದೆಂದು ತೀಕ್ಷ್ಣವಾಗಿ ನುಡಿದರು.
ಪ್ರದೇಶಿಕ ಭಾಷಾ ಎರಡು ಚಲನಚಿತ್ರಗಳಿಗೆ ವಾರ್ಷಿಕ 18 ರಿಂದ 20 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ. ಇದನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಪ್ರಶಸ್ತಿಗಾಗಿ ಲಾಬಿ ನಡೆಸುವ ಪಕ್ರಿಯೆಗಳು ಇಂದು ನಡೆಯುತ್ತಿದೆ. ಇಂತಹ ಚಿತ್ರಗಳು ಸೆನ್ಸಾರ್ ಮಂಡಳಿಯ ಮುಂದೆ ಬಂದಾಗ ಅದು ಯೋಗ್ಯವೇ ಅಲ್ಲವೇ ಎಂದಬುದನ್ನು ನಿರ್ಧರಿಸಲು ಕೊಡವ ಭಾಷೆಯ ತಜ್ಞರುಗಳು ಅಲ್ಲಿರುವುದಿಲ್ಲ. ಇದರಿಂದ ಅರ್ಹವಲ್ಲದ ಚಲನಚಿತ್ರಗಳು ಪ್ರಶಸ್ತಿಯನ್ನು, ಸಹಾಯಧನವನ್ನು ಪಡೆಯುವಂತಾಗುತ್ತಿದ್ದು, ಇದರಿಂದ ಕೊಡವ ಭಾಷೆಯ ಮೇಲೆ ಅಭಿಮಾನವಿಟ್ಟು ಚಲನಚಿತ್ರದಲ್ಲಿ ತೊಡಗಿಸಿಕೊಂಡ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತದೆಂದು ನೇರವಾಗಿ ನುಡಿದರು.
ಕೊಡವ ಭಾಷಾ ಚಲನಚಿತ್ರಗಳು ಕೊಡಗಿನಲ್ಲಿ 1972 ರಿಂದ ನಿರ್ಮಾಣಗೊಳ್ಳಲು ಆರಂಭಿಸಿತು. 2010 ರವರೆಗೆ ಚಲನಚಿತ್ರ ನಿರ್ಮಾಣ ಕುಂಟುತ್ತಾ ಸಾಗಿತ್ತಾದರೆ, ಪ್ರಸ್ತುತ ವಾರ್ಷಿಕ 4 ರಿಂದ 5 ಕೊಡವ ಭಾಷಾ ಚಲನಚಿತ್ರಗಳು ನಿರ್ಮಾಣವಾಗುತ್ತಿದೆ. ಇದರ ನಡುವೆ ಕೆಲ ಕೊಡವ ಭಾಷಾ ಚಲನಚಿತ್ರಗಳು ಸಾರ್ವಜನಿಕ ಪ್ರದರ್ಶನಕ್ಕೆ ಬಾರದೆ ಪ್ರಶಸ್ತಿ, ಸಹಾಯಧನವನ್ನು ಪಡೆಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕಪಡಿಸಿದರು.
‘ಚಲನ ಚಿತ್ರ ಒಕ್ಕೂಟ’ ರಚನೆ ಚಿಂತನೆ : ಕೊಡವ ಭಾಷಾ ಚಲನಚಿತ್ರಗಳನ್ನು ಅತ್ಯಂತ ಕಾಳಜಿ ವಹಿಸಿ, ಸಾಕಷ್ಟು ಸಮಯ ವಿನಿಯೋಗಿಸಿ ನಿರ್ಮಿಸುವ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಇತ್ತೀಚಿನ ಬೆಳವಣಿಗೆಗಳಿಂದ ಸಾಕಷ್ಟು ನೊಂದಿದ್ದಾರೆ. ಈ ಹಿನ್ನೆಲೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ‘ಚಲನ ಚಿತ್ರ ಒಕ್ಕೂಟ’ವನ್ನು ರಚಿಸಲು ಉದ್ದೇಶಿಸಲಾಗಿದೆ. ಇದೇ ಏ.20 ರ ನಂತರ ಈ ಸಂಬಂಧ ಸಭೆಯೊಂದನ್ನು ನಡೆಸಲಾಗುತ್ತದೆಂದು ಮಾಹಿತಿ ನೀಡಿದರು.
ನಿರ್ದೇಶಕ ಆಚೆಯಡ ಗಗನ್ ಗಣಪತಿ ಮಾತನಾಡಿ, ಕೊಡವ ಚಲನಚಿತ್ರವೊಂದನ್ನು ತಿಂಗಳಾನುಗಟ್ಟಲೆ ಪರಿಶ್ರಮ ಪಟ್ಟು ನಿರ್ಮಿಸಲಾಗುತ್ತದೆ. ಆದರೆ, ಬೆರಳೆಣಿಕೆಯ ದಿನಗಳಲ್ಲಿ ಚಿತ್ರವೊಂದನ್ನು ನಿರ್ಮಿಸಿ ಪ್ರಶಸ್ತಿ, ಸಹಾಯಧನಕ್ಕೆ ಲಾಬಿ ಮಾಡಲಾಗುತ್ತಿದೆಯೆಂದು ಆರೋಪಿಸಿದರು.
ನಿರ್ಮಾಪಕ ಹಾಗೂ ನಿರ್ದೇಶಕರಾದ ಕಾಳಿಮಾಡ ದಿನೇಶ್ ನಾಚಪ್ಪ ಮಾತನಾಡಿ, ಸಾರ್ವಜನಿಕ ಪ್ರದರ್ಶನವನ್ನೇ ಕಾಣದ ಪ್ರಾದೇಶಿಕ ಭಾಷಾ ಚಲನ ಚಿತ್ರಗಳಿಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವಕಾಶ ನೀಡಲಾಗುತ್ತದೆ ಮತ್ತು ಪ್ರಶಸ್ತಿಗೂ ಪರಿಗಣಿಸಲಾಗುತ್ತದೆಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದೆ ಮಂಡೀರ ಪದ್ಮಾ ಬೋಪಯ್ಯ ಮಾತನಾಡಿ, ಕೊಡವ ಭಾಷಾ ಸಂಸ್ಕೃತಿಯ ಪರಿಜ್ಞಾನವಿಲ್ಲದೆ, ಕೇವಲ ಭಾಷೆಯನ್ನು ಬಳಸಿ ನಿರ್ಮಿಸುವ ಚಲನಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆ ಮೂಡಲು ಕಾರಣವಾಗುತ್ತದೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಬಾಚಮಾಡ ಕರುಂಬಯ್ಯ ಉಪಸ್ಥಿತರಿದ್ದರು.
Breaking News
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*
- *ವೀರ ಸೇನಾನಿಗಳಿಗೆ ಅಗೌರವ : ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆ ಖಂಡನೆ : ಆರೋಪಿಯ ಗಡಿಪಾರಿಗೆ ಆಗ್ರಹ*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶ*
- *ನ.29ರಂದು ಕೊಡಗು ಜಿಲ್ಲಾ ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆಯ 12ನೇ ವಾರ್ಷಿಕ ಮಹಾಸಭೆ*
- *ನ.30 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಮತ್ತು ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ*
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*