ಮಡಿಕೇರಿ ಏ.13 : ಮಡಿಕೇರಿಯ ಬ್ರೈನೋಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಪದವಿ ಪ್ರದಾನ ಮಾಡಲಾಯಿತು.
ರಾಜ್ಯ ಬ್ರೈನೋಬ್ರೈನ್ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಲ್ ಸ್ವರ್ಣಾಕರ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಮಡಿಕೇರಿ ಕೇಂದ್ರದಲ್ಲಿ ಪದವಿ ಪ್ರದಾನ ಸ್ವೀಕರಿಸಿದ ವಿದ್ಯಾರ್ಥಿಗಳ ಸಂಖ್ಯೆ ವಿಶ್ವದ ಇತರೆ ಬ್ರೈನೋಬ್ರೈನ್ ಕೇಂದ್ರಗಳಲ್ಲೇ ಅತ್ಯಧಿಕ ಮತ್ತು ಎಲ್ಲಾ ಕೇಂದ್ರಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ಮುಖ್ಯಸ್ಥೆ ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೊಷಕರು ಮಾತನಾಡಿ, ಸ್ಮರಣಾ ಶಕ್ತಿ, ಕಲ್ಪನಾ ಶಕ್ತಿ, ಆತ್ಮ ವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣದ ಬಗ್ಗೆ ಆಸಕ್ತಿ, ಹೆಚ್ಚಾಗಿ ಮಕ್ಕಳ ಕನಸಿಗೆ ರೆಕ್ಕೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
::: ಪದವಿ ಪ್ರದಾನ ಸ್ವೀಕರಿಸಿದ ವಿದ್ಯಾರ್ಥಿಗಳು :::
ಹೆಚ್.ಎಸ್.ಆರ್ಯ, ಎಂ.ಎಸ್.ನಿತೀಶ್, ಎಂ.ಜಿ.ಧನ್ವಿತ್, ಹೆಚ್.ಎಲ್.ಆದರ್ಶ್, ಕೆ.ಮಾನ್ವಿಕ್ ಮೌರ್ಯ, ಬಿ.ಆರ್.ಗನ್ಯಶ್ರೀ, ಆನ್ಶಿಯಾ ಡಿ ಕ್ರೂಜ್, ಎನ್.ಕೆ.ಪುನೀತ್, ಹೆಚ್.ಎಲ್.ಅಶ್ರಿತ್, ಎಂ.ಎನ್.ನೀಲ್, ಎಂ.ಸಿ.ಗೌರವ್, ಬಿ.ಎಲ್.ಷಣ್ಮುಖ, ಜಿ.ವಿ.ಲಿಖಿತ್, ಪಿ.ಕೆ.ಶ್ಯಾಮ್ ಸುಂದರ್, ರೂಬೆನ್ ಜೆಸ್ವಿನ್ ಸೆಲ್ವಾನ್, ಆನ್‍ಶೀಲ್ ಲೋಬೊ, ಬಿ.ಡಿ.ಭವೀಶ್ ಪದವಿ ಸ್ವೀಕರಿಸಿದರು.
ಕೇಂದ್ರದ 19ನೇ ಬ್ಯಾಚ್‍ನ ಒಟ್ಟು 17 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಮಕ್ಕಳು ಎರಡೂವರೆ ವರ್ಷದ 10 ಲೆವೆಲ್ಸ್ ಇರುವ ಅಬಾಕಸ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೇಂದ್ರದಿಂದ ಇದುವರೆಗೆ 520 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ ಎಂದು ಕವಿತಾ ಕರುಂಬಯ್ಯ ತಿಳಿಸಿದರು.










