ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ವಿಹೆಚ್‍ಪಿಯ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಚೆಟ್ಟಳ್ಳಿ ಸಮೀಪ ಅಬ್ಯಾಲ ಎಂಬಲ್ಲಿ ಕೃಷ್ಣಮೂರ್ತಿಯವರು ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೆ ಯತ್ನಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೃತ್ತಿಪರ ಅಥವಾ ಸಂಘಟನೆಯ ದ್ವೇಷ ಯಾವುದೇ ಇದ್ದರು ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ಗುಂಡು ಹಾರಿಸಿದವರನ್ನು ಶೀಘ್ರ ಬಂಧಿಸಬೇಕು ಮತ್ತು ಕೃಷ್ಣಮೂರ್ತಿ ಅವರಿಗೆ ಪೊಲೀಸರು ಸೂಕ್ತ ಭದ್ರತೆಯನ್ನು ನೀಡಬೇಕು ಎಂದು ವಿಹೆಚ್‍ಪಿ ಒತ್ತಾಯಿಸಿದೆ.
ದುಷ್ಕರ್ಮಿಗಳ ಬಂಧನವಾಗದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.