ಮಡಿಕೇರಿ ಏ.13 : ಕಡಗದಾಳು ಗ್ರಾಮದ ಆದಿ ಶ್ರೀ ಪನ್ನಂಗಾಲತಮ್ಮೆ ದೇವಾಲಯದ ವಾರ್ಷಿಕ ಉತ್ಸವವು ಏ.15 ರಿಂದ 17ರ ವರೆಗೆ ನಡೆಯಲಿದೆ.
ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ.
ಏ.15 ರಂದು ಬೆಳಿಗ್ಗೆ 7 ಗಂಟೆಗೆ ದೇವರ ಭಂಡಾರ ಏರಿಸುವುದು, ಬೆಳಿಗ್ಗೆ 11 ಗಂಟೆಯಿಂದ ಅಮ್ಮೆ ದೇವರ ಕೊಡೆ, ಚೌವುಂಡಿ, ಅಯ್ಯಪ್ಪ, ಹಾಗೂ ಕುರುಂದ ದೇವರುಗಳ ಉತ್ಸವ ನಡೆಯಲಿದ್ದು, ನಂತರ ಎತ್ತು ಪೋರಾಟ, ಕುರುಂದಕಳಿ, ರಾತ್ರಿ ಚವುಂಡಿ ಬಾರಣಿ ನೆರವೇರಲಿದೆ.
ಏ.16 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ನಂತರ ದೇವಿಯ ಅವಭ್ರತ ಸ್ನಾನ ನೆರವೇರಲಿದ್ದು, ಏ.17 ರಂದು ಬೆಳಿಗ್ಗೆ ದೇವರ ನುಡಿ ಕೇಳುವುದು, ಹರಿಕೆ ಒಪ್ಪಿಸುವುದು, ಭಂಡಾರ ನೋಡುವ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿ ಕೋರಿದೆ.








