ಮಡಿಕೇರಿ ಏ.16 : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ನಗರದ ರಾಜಾಸೀಟ್ ನಲ್ಲಿ ಶನಿವಾರ ಆಯೋಜಿಸಲ್ಪಟ್ಟಿದ್ದ ಕೊಡಗು ಮತ್ತು ಮತದಾನ ವಿಷಯ ಸಂಬಂಧಿತ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತಲಿನ ವಿದ್ಯಾರ್ಥಿಗಳಲ್ಲದೇ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮತದಾನದ ಮಹತ್ವದ ಕುರಿತಂತೆ ವಿದ್ಯಾರ್ಥಿಗಳಲ್ಲಿನ ಆಸಕ್ತಿ, ತಿಳುವಳಿಕೆ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ : 14 ವರ್ಷದೊಳಗಿನ ವಿಭಾಗ -ಹರ್ಷಿತ ಪೊನ್ನಪ್ಪ ಸಂತಜೋಸೇಫರ ಶಾಲೆ ಮಡಿಕೇರಿ (ಪ್ರಥಮ), ಧ್ರುವನಂಜಪ್ಪ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ (ದ್ವಿತೀಯ) , ಧೃತಿ ಕೆ.ಯು. ಸಂತಜೊಸೇಫರ ಶಾಲೆ. ಮಡಿಕೇರಿ (ತೃತೀಯ) ವಿಸ್ಮಯಿ ಎಂ. ಮೊರಾರ್ಜಿ ದೇಸಾಯಿ ವಸತಿಶಾಲೆ, ಕೂಡಿಗೆ ( ಸಮಧಾನಕರ)
14 ರಿಂದ 18 ವರ್ಷದೊಳಗಿನ ವಿಭಾಗ – ಮೋಕ್ಷಾ ಎ.ಕೆ. ಕಾವೇರಿ ವಿದ್ಯಾಸಂಸ್ಥೆ. ವಿರಾಜಪೇಟೆ (ಪ್ರಥಮ) ತಶ್ಮಿಕಾ ಕೆ.ಎಂ. ಸರ್ಕಾರಿ ಪ್ರೌಢಶಾಲೆ ಮೂರ್ನಾಡು (ದ್ವಿತೀಯ), ಮೋಕ್ಷಿತಾ ಕೆ.ಜೆ. ನವೋದಯ ಶಾಲೆ ಗಾಳಿಬೀಡು (ತೃತೀಯ), ಕುನಾಲ್ ದೇವಯ್ಯ ಸಿ.ಸಿ. ರಾಮಕೃಷ್ಣ ವಿದ್ಯಾಕೇಂದ್ರ ಮೈಸೂರು( ಸಮಧಾನಕರ)
18 ವರ್ಷ ಮೇಲ್ಪಟ್ಟವರ ವಿಭಾಗ – ಸ್ವಾಮಿನಾಥ್ ಆರ್. ಮಡಿಕೇರಿ (ಪ್ರಥಮ), ಬಿ.ಟಿ.ದೇಚಮ್ಮ ಮೂರ್ನಾಡು ಕಾಲೇಜು (ದ್ವಿತೀಯ), ಚೈತ್ರಾ ಬಿ.ಎಸ್. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು (ತೃತೀಯ) ಮಾಧುರ್ಯ ಮಂಗಳೂರು (ಸಮಧಾನಕರ)
ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು. ಅಂತೆಯೇ ಮತದಾನದ ಮಹತ್ವ ಸಾರುವ ಬೃಹತ್ ಕ್ಯಾನ್ವಸ್ ನಲ್ಲಿ ನೂರಾರು ಜನರು, ಪ್ರವಾಸಿಗರು ನಾನು ಮತಹಾಕುವೆ ಎಂದು ಸಹಿ ಹಾಕಿ ಅಭಿಯಾನಕ್ಕೆ ಸ್ಪಂದಿಸಿದ್ದಾರೆ ಎಂದು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.









