ಮಡಿಕೇರಿ ಏ.17 : ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ “ಕರ್ನಾಟಕ ದಲಿತ ಸಂಘರ್ಷ ಸಮಿತಿ” ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲೆಯ ಆಯಾಯ ತಾಲೂಕುಗಳಲ್ಲಿ ಸಂಘಟನೆಯ ಪ್ರಮುಖರು ತಮ್ಮ ತಮ್ಮ ನಿವಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಸಮರ್ಪಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಂಸಿಹ ಅವರ ವಿರಾಜಪೇಟೆಯ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಗಾಯತ್ರಿ ನರಂಸಿಹ ಡಾ.ಅಂಬೇಡ್ಕರ್ ಅವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ. ಸಂವಿಧಾನದ ಮೂಲ ಉದ್ದೇಶವನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ವಿರಾಜಪೇಟೆ ತಾಲೂಕಿನ ಸಂಘಟನೆ ಪ್ರಮುಖರಾದ ಜೇಮ್ಸ್, ಮನು, ರಘು, ಮಂಜು, ಮಂಜುಳಾ, ಕುಳಿಯ, ಬೋಜ, ಅಯ್ಯಪ್ಪ, ಸವಿತ ಕೊಡ್ಲಿಪೇಟೆ ಪವಿತ್ರ ಮತ್ತು ಇತರರು, ಸೋಮವಾರಪೇಟೆಯಲ್ಲಿ ಮನೋಜ್, ಶ್ರೀನಿವಾಸ್, ಕೃಷ್ಣ ಇತರರು, ಮಡಿಕೇರಿಯಲ್ಲಿ ಶಶಿಕಲಾ, ಭಾಗ್ಯವತಿ,ಗೌರಮ್ಮ ಹಾಗೂ ಪೊನ್ನಂಪೇಟೆಯಲ್ಲಿ ಮುತ್ತಮ್ಮ, ರಾಜೇಶ್ವರಿ, ರಾಜಪ್ಪ ಹಾಗೂ ಇತರರು ಹಾಜರಿದ್ದರು.