
ಮಡಿಕೇರಿ ಫೆ.20 NEWS DESK : ನಾಪೋಕ್ಲು ಗ್ರಾಮದ ಶ್ರೀ ಚೆವೂಟು ಶಾಸ್ತಾವು ಈಶ್ವರ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾಗವಹಿಸಿ, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಚೆವೂಟು ಬಾಳಿಯಾಡ ಐನ್ ಮನೆಯ ಪಟ್ಟಿಲ್ ಮುಡಿ ತೆರೆ ಉತ್ಸವದಲ್ಲಿ ಭಾಗವಹಿಸಿದರು. ಇದೇ ಸಂದರ್ಭ ಬಾಳಿಯಾಡ ಕುಟುಂಬದ ಹಿರಿಯರು ತಮ್ಮ ಕುಟುಂಬದ ಪರವಾಗಿ ಶಾಸಕರನ್ನು ಸನ್ಮಾನಿಸಿ, ಶಾಸಕರು ನೀಡುತ್ತಿರುವ ಅನುದಾನಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಧನ್ಯವಾದಗಳು ಸಲ್ಲಿಸಿದರು. ನಾಪೋಕ್ಲು ವಲಯ ಅಧ್ಯಕ್ಷರಾದ ಕುಶಾಲಪ್ಪ, ಪಂಚಾಯಿತಿ ಸದಸ್ಯರಾದ ಅರುಣ್ ಬೇಬ, ಶಾಬಾ ತಿಮ್ಮಯ್ಯ, ಬಾಳಿಯಾಡ ಕರುಣ್ ಕಾಳಪ್ಪ, ಬಿ.ಕೆ ಸುಬ್ರಮಣಿ, ಹರೀಶ್, ದಿವ್ಯ, ಪ್ರತೀಶ್, ಅಪ್ಪ ಸ್ವಾಮಿ, ಪೂಣಚ್ಚ, ಕಡಿಯತ್ ಊರಿನವರು, ಅಧ್ಯಕ್ಷರಾದ ನಟೋಳಂಡ ಚರ್ಮಣ್ಣ, ದೇವತಕ್ಕ, ಬಸಪ್ಪ, ತೊರೇರ ಮುದ್ದಾಯ್ಯ, ದೀಪು, ಸರ್ವ ಸದಸ್ಯರುಗಳು ಹಾಗೂ ಪ್ತಮುಖರು ಉಪಸ್ಥಿತರಿದ್ದರು.









