
ಮಡಿಕೇರಿ ಫೆ.20 NEWS DESK : ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಮೇ 9 ಮತ್ತು 10 ರಂದು ನಡೆಯಲಿರುವ ಮೂರನೇ ರಾಷ್ಟ್ರೀಯ ಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯ ಕರಪತ್ರ (Broucher) ಬಿಡುಗಡೆಗೊಂಡಿತು. ಕಾಲೇಜಿನ ಸುಜ್ಞಾನ ದೀಪಿಕಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ಕೆ.ವಿ.ಮನೋಹರ್ ಪುತ್ತೂರು ಕರಪತ್ರವನ್ನು ಬಿಡುಗಡೆಗೊಳಿಸಿ ಕಾನೂನು ಮಹಾವಿದ್ಯಾಲಯದಲ್ಲಿ ಅಣುಕು ನ್ಯಾಯಾಲಯ ಸ್ಪರ್ಧೆಗಳ ಪ್ರಾಮುಖ್ಯತೆ ಮತ್ತು ವಿಶಿಷ್ಟತೆಯನ್ನು ವಿವರಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ನಿರ್ದೇಶಕ ಡಾ. ಬಿ.ಕೆ.ರವೀಂದ್ರ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇವರು ಅಣುಕು ನ್ಯಾಯಾಲಯದ ಸಮಿತಿಯನ್ನು ಘೋಷಿಸಿದರು. ಉಡುಪಿ ಸ್ಟೇರಾ ಎಲ್ ಎಲ್ ಸಿ ಲೀಗಲ್ ಎಕ್ಸಿಕ್ಯೂಟಿವ್ ಮನೀಶ್ ಕೆ ಸಾಲಿಯಾನ್ ಅಣುಕು ನ್ಯಾಯಾಲಯದ ರೂಪುರೇಷೆಗಳನ್ನು ವಿವರಿಸಿದರು. ಕಾಲೇಜಿನ ಸಂಚಾಲಕರಾದ ಕೆ.ಎಂ.ವಿಜಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಸಹಾಯಕ ಕಾರ್ಯನಿರ್ವಣಾಧಿಕಾರಿ ವೆಂಕಟರಮಣ ರಾವ್, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲರಾದ ಎ.ಪಿ.ಅಕ್ಷತಾ, ಸಹಾಯಕ ಪ್ರಾಧ್ಯಾಪಕರಾದ ಸುಭಾಷಿನಿ ಜೆ, ಸಂಗೀತಾ ಎಸ್.ಎಂ., ಅಣುಕು ನ್ಯಾಯಾಲಯದ ಸಮಿತಿಯ ಸಂಯೋಜಕರು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.









