ಮಡಿಕೇರಿ ಏ.17 : ಭಾರತದ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಪೊನ್ನಂಪೇಟೆಯ ಬೆಳ್ಳೂರು ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಬೆಳ್ಳೂರು ಗ್ರಾಮದ ಹಿರಿಯರಾದ ಮುತ್ತಣ್ಣ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಂತರ ಸಮಿತಿಯ ಪ್ರಮುಖರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಗೌರವಿಸಿದರು.
ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ತಾಲೂಕು ಸಂಘಟನಾ ಸಂಚಾಲಕಾರದ ಕರ್ಕು, ಧನು, ಚಂದ್ರ, ಜೌರ, ನಿತೇಶ್ , ಗ್ರಾಮ ಸಂಚಾಲಕ ಸುರೇಶ್ ಹಾಗೂ ಮತ್ತಿತರು ಹಾಜರಿದ್ದರು.