ಮಡಿಕೇರಿ ಏ.18 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಲಭಿಸದೆ ಇರುವುದರಿಂದ ನಾನು ಮತ್ತಷ್ಟು ಪ್ರಬುದ್ಧನಾಗಿದ್ದು, ಪಕ್ಷದ ಹಿರಿಯ ನಾಯಕರ ಅಣತಿಯಂತೆ ಸಕ್ರಿಯ ಕಾರ್ಯಕರ್ತನಾಗಿರುವೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿರಾಜಪೇಟೆ ಕ್ಷೇತ್ರದ ಮೇಲೆ ನನಗಿದ್ದ ಅಭಿಮಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಹೊಸ ಮನ್ವಂತರ ಆರಂಭಿಸಬೇಕು ಎನ್ನುವ ಅಭಿಲಾಷೆ ಇತ್ತು. ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಹಿತೈಷಿಗಳು ನನ್ನನ್ನು ಚುನಾವಣೆಗೆ ಸ್ಪರ್ಧಿಸಿ ಎಂದು ಮಾಡಿದ ಒತ್ತಾಯ ಮತ್ತು ಪ್ರೋತ್ಸಾಹದಿಂದ ನನ್ನ ಹೆಸರು ರಾಜ್ಯ ಮಾತ್ರವಲ್ಲ ದೆಹಲಿಯ ಭಾರತೀಯ ಜನತಾ ಪಕ್ಷದ ವರಿಷ್ಠರ ಮುಂದೆಯೂ ಪರಿಗಣಿತವಾಗುವಂತೆ ಮಾಡಿತು. ನನಗೆ ವೈಯಕ್ತಿಕವಾಗಿ ರಾಜಕೀಯ ಆಸಕ್ತಿಗಿಂತ ಕ್ಷೇತ್ರದ ಮೇಲಿನ ಹಿತಾಸಕ್ತಿ ಮುಖ್ಯವಾಗಿತ್ತು.
ವಿಶೇಷವಾಗಿ ವಿರಾಜಪೇಟೆ ಕ್ಷೇತ್ರದ ಜನತೆಗೆ ನಾನೋರ್ವ ಶಿಸ್ತಿನ ಸಿಪಾಯಿಯಾಗಲು, ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಂತೆ ನಾನು ಕೂಡ ಕೆಲಸಗಾರನಾಗಬೇಕೆಂದು ನನ್ನನ್ನು ಪ್ರೇರೇಪಿಸಿತು. ಕೊಡಗು ಜಿಲ್ಲೆ ಅನೇಕ ವೈವಿಧಗಳನ್ನು ಒಳಗೊಂಡ ಖನಿಜ. ಕ್ರೀಡೆ, ಸಂಸ್ಕೃತಿ, ಸಂಪ್ರದಾಯ, ಪ್ರಕೃತಿ, ದೈವೀ ಕ್ಷೇತ್ರ, ದೇವರ ಕಾಡು, ಕಾನನ ಸೇರಿದಂತೆ ಮಂದ್ ನಿಂದ ಕುಂದ್ ವರೆಗೂ, ಯೋಧ ಕ್ಷಾತ್ರ ಸಂಪನ್ನತೆಯ ವೀರ ಜವಾನ್ ನಿಂದ ಅನ್ನ ನೀಡುವ ಕಿಸಾನ್ ವರೆಗೂ ಸಂಪನ್ನ ಖನಿಜಗಳ ಬೀಡು ಕೊಡಗು. ಇಂತಹ ಕ್ಷೇತ್ರದಲ್ಲಿ ಉತ್ಸವ ಮೂರ್ತಿಯಾಗಲು ನಾನು ಬಯಸಲಿಲ್ಲ. ಬದಲಿಗೆ ಕ್ಷೇತ್ರ ಪಾಲಕನಾಗಿ ಜನಸೇವೆ, ಜನ್ಮಭೂಮಿ ಸೇವೆಗೆ ನಿಮ್ಮ ಆಶೀರ್ವಾದ ಬಯಸಿದವನು ನಾನು.
ಜಾತಿ, ಜನಾಂಗ, ಸಮುದಾಯ ಮೀರಿ ನನ್ನಲ್ಲಿರುವ ಯೋಗ್ಯತೆಯನ್ನು ಮನಗಂಡು ಶಾಸಕ ಸ್ಥಾನದ ಪೈಪೋಟಿಗೆ ಅಣಿಗೊಳಿಸಿದವರು ನೀವು ಎಂಬ ಹೆಮ್ಮೆ ನನ್ನಲ್ಲಿ ಚಿರಸ್ಥಾಯಿಯಾಗಿ ಇರಲಿದೆ. ಇನ್ನು ರಾಜಕೀಯ ಎಂದಾಕ್ಷಣ ಅಲ್ಲಿ ಹಲವು ಮಾನದಂಡಗಳು ಚಲಾವಣೆಗೆ ಬರಲಿದೆ. ನಾನು ಪ್ರಸ್ತಾಪಿಸಿದಕ್ಕಿಂತ ನೀವೆಲ್ಲರೂ ಉಲ್ಲೇಖಿಸಿದ ಎಲ್ಲಾ ಮಾನದಂಡಗಳು ನನ್ನಲಿದ್ದರೂ ಅಂತಿಮ ಕ್ಷಣದಲ್ಲಿ ಪ್ರಕಟಗೊಂಡ ವರಿಷ್ಟರ ಪ್ರಕಟಣೆ ನನ್ನನ್ನು ಇನ್ನಷ್ಟು ಪ್ರಬುದ್ಧಗೊಳಿಸಿದೆ ಎನ್ನಬಹುದು. ಸಂಘದ ಒಡನಾಟ, ಮೋದಿ ಬ್ರಿಗೇಡ್ ನಲ್ಲಿ ಅರ್ಪಣೆ, ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸೇವೆಯ ನಡುವೆ ಕ್ಷೇತ್ರದ ಕೇಂದ್ರ ಬಿಂದುವಾಗಿಸಲು ಜನ ತೋರಿದ ಉತ್ಸಾಹ, ಪ್ರೀತಿ, ಶ್ರಮ ನಾನೆಂದೂ ಕಳೆದುಕೊಳ್ಳಲಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತದಂತೆ ವ್ಯಕ್ತಿ ನಿರ್ಮಾಣ, ರಾಷ್ಟ್ರ ನಿರ್ಮಾಣ, ಧರ್ಮ ರಕ್ಷಣೆ, ನಮ್ಮ ನಿತ್ಯದ ಕಾಯಕ. ಪಕ್ಷದ ಹಿರಿಯ ನಾಯಕರ ಅಣತಿಯಂತೆ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷವನ್ನು ಕಟ್ಟಿ ಬೆಳೆಸಲು ನನ್ನ ಪ್ರಯತ್ನ ಸದಾ ಮುಂದುವರಿಯಲಿದೆ ಎಂದು ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.
Breaking News
- *ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ*
- *ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅಲುಫ್ ಎ.ಆರ್ ಚಾಂಪಿಯನ್*
- *ಮಡಿಕೇರಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ : ರಾಷ್ಟ್ರದ ಸದೃಢತೆಗೆ ಯುವಜನರು ಕೈಜೋಡಿಸಿ: ಸಿವಿಲ್ ನ್ಯಾಯಾಧೀಶೆ ಶುಭ*
- *ಮಡಿಕೇರಿಯಲ್ಲಿ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಕ್ರಿಕೆಟ್ ಪಂದ್ಯಾವಳಿ : ಸಾಧಕ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಿ : ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಕರೆ*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
- *ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಹರಪಳ್ಳಿ ರವೀಂದ್ರ*
- *ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಆಟೋ ಚಾಲಕರು ಕನ್ನಡ ನಾಡು-ನುಡಿಯ ರಾಯಭಾರಿಗಳು : ವಿ.ಪಿ.ಶಶಿಧರ್ ಬಣ್ಣನೆ*
- *ಗೋಣಿಕೊಪ್ಪ : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭ : ಡಾ.ಕೆ.ಬಸವರಾಜು*
- *ಶಾಸಕ ಎ.ಎಸ್.ಪೊನ್ನಣ್ಣ ರಿಗೆ ವಿಧಾನಸಭಾಧ್ಯಕ್ಷರ ಕಚೇರಿಯಿಂದ ಕೊಡುಗೆ*
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*