ಕುಶಾಲನಗರ, ಏ.18 : ಕುಶಾಲನಗರ ಗಡಿ ಭಾಗದ ಚುನಾವಣಾ ವಾಹನ ತಪಾಸಣಾ ಕೇಂದ್ರದಲ್ಲಿ ಮಂಗಳವಾರ ದಾಖಲೆ ಇಲ್ಲದ 4.77 ಲಕ್ಷ ರೂ ಹಣ ವಶಪಡಿಸಿಕೊಳ್ಳಲಾಗಿದೆ.
ಕೊಪ್ಪ ಆವರ್ತಿ ಕಡೆಯಿಂದ ಕೊಡಗು ಜಿಲ್ಲೆಯ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಸಂದರ್ಭ ಚುನಾವಣಾ ಅಧಿಕಾರಿಗಳ ತಂಡದ ಪಿ ಬಿ ಪೂವಯ್ಯ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಂದ್ರ ಅವರ ನೇತೃತ್ವದ ತಂಡ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದ ವೇಳೆಗೆ ದಾಖಲೆ ಇಲ್ಲದ 4.77 ಲಕ್ಷದ ನಗದು ಪತ್ತೆಯಾಗಿದೆ. ಹಣವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚುನಾವಣಾ ತಪಾಸಣಾ ಕೇಂದ್ರದ ಕಾರ್ಯಾಚರಣೆ ತಂಡದಲ್ಲಿ ಮಹದೇವ್, ಸಚಿನ್ ಎಎಸ್ಐ ಗಣಪತಿ, ಪೊಲೀಸ್ ಸಿಬ್ಬಂದಿ ಮನೋಜ್ ಮತ್ತಿತರರು ಇದ್ದರು.