ಮಡಿಕೇರಿ ಏ.19 : ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊಲೀಸ್ ವೀಕ್ಷಕರಾಗಿ ದೆಬಾಸಿಸ್ ಸರ್ಕಾರ್ (ಐಪಿಎಸ್) ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.
ಜಿಲ್ಲೆಗೆ ಭೇಟಿ ಮಾಡಿದ ಅವರು, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.
ವೀಕ್ಷಕರು ಸುದರ್ಶನ ಅತಿಥಿ ಗೃಹದಲ್ಲಿ ಬೆಳಿಗ್ಗೆ 10 ರಿಂದ 11ರ ವರೆಗೆ ಸಂದರ್ಶನಕ್ಕೆ ಲಭ್ಯವಿರಲಿದ್ದಾರೆ. ಅಲ್ಲದೆ ಮೊ.808849288 ಹಾಗೂ ಅವರ ಕ್ಷೇತ್ರಾಧಿಕಾರಿ ಜಿ.ಕೆ.ರಾಘವೇಂದ್ರ ಅವರನ್ನು ಮೊ.948080498 ಮೂಲಕ ಸಂಪರ್ಕ ಮಾಡಬಹುದಾಗಿದೆ.







