ವಿರಾಜಪೇಟೆ 25 : ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಣಗೊಳಿಸಲು ಪುರಸಭೆಯು ವಿಧಿಸಿರುವ ಶುಲ್ಕ ಅವೈಜ್ಞಾನಿಕವಾಗಿದೆ ಅಲ್ಲದೆ ಮೂಲಭೂತ ಸೌಕರ್ಯಗಳನ್ನು ನೀಡದೆ ತೆರಿಗೆ ಏರಿಕೆಗೊಳಿಸಿರುವುದು ಖಂಡನೀಯ ಎಂದು ನಾಗರಿಕ ಸಮಿತಿ ಸಂಚಾಲಕ ಇ.ಆರ್.ದುರ್ಗಾ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಗೋಣಿಕೊಪ್ಪ ರಸ್ತೆಯಲ್ಲಿರುವ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಕ್ರಮವನ್ನು ಪುರಸಭೆಯ ಆಡಳಿತರೂಢ ಸದಸ್ಯರು ಒಪ್ಪಿರುವುದು ಅವೈಜ್ಞಾನಿಕ. ಈ ಬಗ್ಗೆ ವಿರೋಧ ಪಕ್ಷದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು ಆದೇಶ ಜಾರಿಗೆ ಮಾಡಲಾಗಿದೆ ಎಂದು ಆರೋಪಿಸಿದರು.
ವಾಹನ ಶುಲ್ಕ ವಿಧಿಸುವುದರಿಂದ ವಾಹನ ದಟ್ಟಣೆ ನಿಯಂತ್ರಣ ಮಾಡಬಹುದಾಗಿದೆ ಎಂದು ಸಭೆಯು ಒಪ್ಪಿಗೆ ಸೂಚಿಸಿ ಶುಲ್ಕ ವಿಧಿಸುವ ಕ್ರಮ ಜಾರಿಗೆಗೊಳಿಸಿದೆ. ನಗರದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಅವ್ಯವಸ್ಥೆಯಿಂದ ಕೂಡಿದೆ. ಪಾದಚಾರಿಗಳಿಗೆ ಸಂಚಾರ ಮಾಡಲು ಯೋಗ್ಯವಾದ ಪಾದಚಾರಿ ರಸ್ತೆಗಳು ಇಲ್ಲಾ, ಒಳಚರಂಡಿ ವ್ಯವಸ್ಥೆಯು ಕ್ರಮಬದ್ಧವಾಗಿ ನಿರ್ವಹಣೆಯಿಲ್ಲಾ. ವಾಹನ ಮಾಲೀಕರು ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸಿ ಇತರ ಪ್ರದೇಶಗಳಿಗೆ ತೆರಳುವುದು ಸಾಮಾನ್ಯವಾಗಿದೆ. ನೂತನವಾಗಿ ಕಟ್ಟಡ ನಿರ್ಮಾಣ ಮಾಡುವವರು ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಬೇಕು ಎಂಬುದು ಕಾನೂನು ಇದ್ದರು ಸೂಕ್ತ ಸೌಕರ್ಯಯಿಲ್ಲದೆ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಗೊಳಿಸಲಾಗುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದರು.
ಮುಖ್ಯ ರಸ್ತೆ ಸೇರಿದಂತೆ ಗೊಣಿಕೊಪ್ಪಲು ರಸ್ತೆ ಎಲ್ಲಾ ರಸ್ತೆ ಸಂಚಾರವು ದುಸ್ತರವಾಗಿದೆ. ಸಮಿತಿ ಹಲವು ಬಾರಿ ವಾಹನ ದಟ್ಟಣೆಯನ್ನು ನಿಯಂತ್ರಣ ಮಾಡಲು ಕೆಲವು ಸಲಹೆಗಳನ್ನು ನೀಡಿತ್ತು. ಸಲಹೆಗಳಿಗೆ ಬೆಲೆ ನೀಡದೆ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶನ ಮಾಡಿದೆ. ಪುರಸಭೆಯ ಅಧ್ಯಕ್ಷರು ಸರ್ವಾಧಿಕಾರದ ಧೋರಣೆಯಿಂದ ಆದೇಶವನ್ನು ಮಾಡಿದ್ದಾರೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು, ಬಾರಿ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ನಿಲುಗಡೆಗಾಗಿ ಸೂಕ್ತ ಅವಕಾಶ ಕಲ್ಪಿಸಬೇಕು. ಜನತೆಯ ಹಣ ಸಂಗ್ರಹ ಮಾಡುವತ್ತಾ ಪುರಸಭೆಯ ಚಿತ್ತವಾಗಿದೆ ಎಂದು ದೂರಿದರು.
ಸಮಸ್ಯೆಗಳು ಬೆಟ್ಟದಷ್ಟುಯಿದ್ದರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲರಾಗಿದ್ದಾರೆ. ವಾಹನಗಳ ದಟ್ಟಣೆಯ ಸಮಸ್ಯೆಯ ಬಗೆಹರಿಸುವ ಬದಲು ವಾಹನಗಳ ಮೇಲಿನ ಶುಲ್ಕ ಹೆಚ್ಚಿಸಿರುವುದು ಮೂರ್ಖತನವಾಗಿದೆ ಎಂದು ಆರೋಪಿಸಿದ ದುರ್ಗಾಪ್ರಸಾದ್ ವಾಹನ ಶುಲ್ಕ ಏರಿಕೆಯನ್ನು ವಿರೋಧಿಸುತ್ತದೆ ಅಲ್ಲದೆ ನಾಗರಿಕ ಸಮಿತಿ ನೀಡಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರುವುವಂತೆ ಒತ್ತಾಯಿಸಿದರು.
ಸಮಿತಿಯ ಸದಸ್ಯ ಅಬ್ದುಲ್ ರೆಹಮಾನ್ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿಗೆ ಆಹಕಾರ ತೆಲೆದೊರತ್ತದೆ ಎಂದು ತಿಳಿದಿದ್ದರು ಯಾವುದೇ ಮುಂಜಾಗೃತ ಕ್ರಮಕ್ಕೆ ಮುಂದಾಗದಿರುವುದು ಶೋಚನೀಯ, ನಾಗರಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಪುರಸಭೆಯು ವಿಫಲವಾಗಿದೆ, ಕೋಟಿ ಕೋಟಿ ಅನುದಾನಗಳು ಬಂದರು ಮುಂದಾಲೋಚನೆಯಿಲ್ಲದೆ ಕ್ರಿಯಾಯೋಜನೆ ತಯಾರಿಸುವಲ್ಲಿ ವಿಫಲತೆಯನ್ನು ಕಾಣಲಾಗಿದೆ. ಸಮಸ್ಯೆಗಳಿದ್ದರು ಈ ಹಿಂದೆ ನಡೆದ ಪುರಸಭೆಯ ಸಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಧ್ಯಕ್ಷರು ಇಲ್ಲದೆ ಚುನಾಯಿತ ಪ್ರತಿನಿಧಿಯಿಂದ ಸಭೆಯನ್ನು ನಡೆಸಲಾಗಿದೆ. ಪುರಸಭೆಯು ಸಾಮಾನ್ಯ ಜನತೆಯ ಮೇಲಿರುವ ಹೊಣೆಗಾರಿಕೆಯನ್ನು ಮರೆತಿದೆ, ಈ ಎಲ್ಲಾ ಕಾರಣಗಳಿಂದ ಪುರಸಭೆಯನ್ನು ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಕೀಲ ಮತ್ತು ನಾಗರಿಕ ಸಮಿತಿಯ ಸಹ ಸಂಚಾಲಕ ಬಿ.ಇ.ಸೋಮಲೋಕನಾಥ್, ಸದಸ್ಯರಾದ ಎಲ್.ಜಿ. ಆಶೋಕ್ ಮತ್ತು ಶರೀಫ್ ಉಪಸ್ಥಿತರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ