ಮಡಿಕೇರಿ ಏ.28 : ಸೋಲಿನ ಭೀತಿಯಲ್ಲಿ ಪ್ರತಿಸ್ಪರ್ಧಿಗಳು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದು, ಜನ ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ, ಈಗಾಗಲೇ ರದ್ದಾಗಿರುವ ಟಿಪ್ಪು ಜಯಂತಿ ವಿಚಾರ ಮುಗಿದು ಹೋದ ಅಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೂರು ವರ್ಷಗಳ ಹಿಂದೆಯೇ ಟಿಪ್ಪು ಜಯಂತಿ ರದ್ದಾಗಿದೆ. ಉಚ್ಚ ನ್ಯಾಯಾಲಯದಲ್ಲಿ ರದ್ದು ಮಾಡಿದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದಾಗ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿತ್ತು. ಆದ್ದರಿಂದ ಇದು ಮುಗಿದು ಹೋಗಿರುವ ಅಧ್ಯಾಯ ಎಂದು ತಿಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದವರು ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸದೆ ಭಾವನೆಗಳನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮತಯಾಚಿಸಲು ಯಾವುದೇ ಅಭಿವೃದ್ಧಿ ಪರ ಚಿಂತನೆಗಳಿಲ್ಲ ಎಂದು ಟೀಕಿಸಿದ್ದಾರೆ.
ತಾಯಿ ಕಾವೇರಿಯ ತೀರ್ಥೋದ್ಭವ ಹಾಗೂ ಕಾವೇರಮ್ಮನ ಮೇಲೆ ನಾನು ಅಪಾರ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟುಕೊoಡಿದ್ದೇನೆ. ಪ್ರತಿನಿತ್ಯ ಕಾವೇರಿ ತಾಯಿಯನ್ನು ಪೂಜಿಸುವ ನನ್ನ ಭಕ್ತಿಯನ್ನು ಯಾರೂ ಪ್ರಶ್ನೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
1992 ರಲ್ಲಿ ಸೋಮವಾರಪೇಟೆಯಲ್ಲಿ ನಡೆದ ಪಾಕ್ ಧ್ವಜದ ಪ್ರಕರಣದ ಕುರಿತು ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ಪ್ರಕರಣ ನಡೆಯುವಾಗ ನಾನು 18 ವರ್ಷದ ಬಾಲಕ. ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ತೀರ್ಪು ಬಂದು ಮುಕ್ತಾಯವಾಗಿದೆ. ಆದರೆ ಸುಮಾರು 30 ವರ್ಷಗಳ ಹಳೆಯ ಪ್ರಕರಣವನ್ನು ಸಾಯಲು ಬಿಡದೆ ನೈಜತೆ ಇಲ್ಲದ ಹೇಳಿಕೆಗಳನ್ನು ನೀಡಿ ಭಾವನೆಗಳನ್ನು ಕೆಣಕಲಾಗುತ್ತಿದೆ. ಆದರೆ ಸೋಲಿನ ಭೀತಿಯಿಂದ ಮಾಡುತ್ತಿರುವ ಅಪಪ್ರಚಾರಗಳನ್ನು ಜಿಲ್ಲೆಯ ಪ್ರಜ್ಞಾವಂತ ಮತದಾರರು ನಂಬುವುದಿಲ್ಲ. ನಿರಾಧಾರ ಆರೋಪಗಳಿಗೆ ಯಾರೂ ಕಿವಿಗೊಡಬಾರದು, ಜನಪರ ಕಾಳಜಿ ಮತ್ತು ಅಭಿವೃದ್ಧಿಪರ ಚಿಂತನೆಯೊoದಿಗೆ ಸ್ಪರ್ಧಿಸುತ್ತಿದ್ದೇನೆ. ಈಗಾಗಲೇ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ನೋಡಿದ್ದಾರೆ. ಮುಂದೆ ಗೆದ್ದು ಬಂದರೆ ಸಕಾಲದಲ್ಲಿ ಸ್ಪಂದಿಸುವ ಭರವಸೆ ಜನರಲ್ಲಿದೆ. ಕಳೆದ 20 ವರ್ಷಗಳಿಂದ ಒಬ್ಬರನ್ನೇ ಬೆಂಬಲಿಸುತ್ತಾ ಬಂದಿರುವ ಜನ ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ. ಇದೇ ಕಾರಣದಿಂದ ನಾನು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ಎ.ಎಸ್.ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ನಾನು ಎಲ್ಲೂ ಕಾನೂನು ಉಲ್ಲಂಘಿಸಿಲ್ಲ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*