ಸಿದ್ದಾಪುರ ಏ.28 : ಮತಗಟ್ಟೆ ಸಂಖ್ಯೆ 110ಮತ್ತು111 ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 100ಮಿ. ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಕೋರಿ ಗ್ರಾ.ಪಂ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಸಿದ್ದಾಪುರ ಗ್ರಾ,ಪಂ ಸದಸ್ಯರಾದ ಪ್ರೇಮ, ಸಮೀರ, ದೇವಜಾನು ಅವರು ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರನ್ನು ಭೇಟಿಯಾಗಿ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಗತ್ಯ ಕ್ರಮ ಕೈ ಗೊಳ್ಳುವ ಭರವಸೆ ನೀಡಿದರು.
ನಂತರ ಮಾತನಾಡಿದ ಗ್ರಾ.ಪಂ.ಸದಸ್ಯೆ ಪ್ರೇಮ ಈ ಪ್ರದೇಶದಲ್ಲಿ ಯಾವುದೇ ಬೀದಿ ದೀಪಗಳ ಅಳವಡಿಕೆಯಾಗಿಲ್ಲ, ಕಸವಿಲೆವಾರಿಗೆ ಸೂಕ್ತ ಜಾಗವಿಲ್ಲದೆ ಈ ಪ್ರದೇಶದಲ್ಲಿ ಶೇಖರಣೆ ಮಾಡಿದ್ದು . ಎರಡು ವಾರದ ಹಿಂದೆ ಈ ಪ್ರದೇಶದಲ್ಲಿ ಶೇಖರಣೆ ಮಾಡಿಟ್ಟಂತಹ ತ್ಯಾಜ್ಯದ ಗೋದಾಮಿಗೆ ರಾತ್ರಿ ಬೆಂಕಿ ಅವಘಡ ನಡೆದಿತ್ತು.
ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿರುವುದರಿಂದ ಸೋಳ್ಳೆ,ನೊಣಗಳು ಹೆಚ್ಚಿದೆ ಈ ಮತಗಟ್ಟೆ ಸುತ್ತ ನೂರಾರು ಕುಟುಂಬಗಳು ಇದ್ದು ಅಲ್ಲದೆ ಹೊರಗಿನಿಂದ ಬರುವ ಸಿಬ್ಬಂದಿ ಗಳಿಗೆ ಮಾರಕ ರೋಗ ಹರಡುವ ಭೀತಿ ಇದೆ ಎಂದು ಗಮನ ಸೆಳೆದರು.