ಮಡಿಕೇರಿ ಮೇ 2 : ಜಿಲ್ಲಾಡಳಿತ, ಸ್ವೀಪ್ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮೇ, 6 ರಂದು ಸಂಜೆ 6.30 ಗಂಟೆಗೆ ಕುಶಾಲನಗರದ ಗಣಪತಿ ದೇವಸ್ಥಾನದಿಂದ ‘ಕ್ಯಾಂಡಲ್ ದೀಪದೊಂದಿಗೆ’ ಜಾಥ ನಡೆಯಲಿದೆ.
ಗಣಪತಿ ದೇವಸ್ಥಾನದಿಂದ ಟೌನ್ ಕಾಲೋನಿ ಮತ್ತು ರಥ ಬೀದಿ ಮೂಲಕ ಬಸ್ ನಿಲ್ದಾಣಕ್ಕೆ ಜಾಥ ತಲುಪಲಿದೆ. ಜಾಥದಲ್ಲಿ ಪಾಲ್ಗೊಳ್ಳುವವರು ಕ್ಯಾಂಡಲ್ ಅಥವಾ ಮಣ್ಣಿನ ದೀಪವನ್ನು ತೆಗೆದುಕೊಂಡು ಬರಬೇಕು. ಜಾಥಾದಲ್ಲಿ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ಕೋರಿದ್ದಾರೆ.









