Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*
  • *ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*
  • *ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*
  • *ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*
  • *ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*
  • *ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆಗೆ ಪ್ರಶಸ್ತಿಯ ಗರಿ*
  • *ವನ್ಯಜೀವಿಗಳ ಉಪಟಳ ತಡೆಗೆ ಆಗ್ರಹ : ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ ಯತ್ನ : ಹೆದ್ದಾರಿ ತಡೆದು ಪ್ರತಿಭಟನೆ*
  • *ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನ : ಕಿಡಿಗೇಡಿಯ ಬಂಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹ*
  • *ಕಾಡಾನೆ ದಾಳಿ : ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*
  • *ಕುಶಾಲನಗರ : ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ವನಿತಾ ಚಂದ್ರಮೋಹನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪರೀಕ್ಷೆ ದಿನಗಳು : ರಾತ್ರಿ ಜಾಗರಣೆ ಹಾನಿಕಾರಕ : ಡಾ.ಕೆ.ಬಿ.ಸೂರ್ಯಕುಮಾರ್* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ರೋಗ ಮುಕ್ತ ವಿಶೇಷ

*ಪರೀಕ್ಷೆ ದಿನಗಳು : ರಾತ್ರಿ ಜಾಗರಣೆ ಹಾನಿಕಾರಕ : ಡಾ.ಕೆ.ಬಿ.ಸೂರ್ಯಕುಮಾರ್* 

ಫೆಬ್ರವರಿ 22, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

*ಪರೀಕ್ಷೆ ದಿನಗಳು : ರಾತ್ರಿ ಜಾಗರಣೆ ಹಾನಿಕಾರಕ : ಡಾ.ಕೆ.ಬಿ.ಸೂರ್ಯಕುಮಾರ್* ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಶುರುವಾಗುತ್ತದೆ. ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕದ ಛಾಯೆ ಮೂಡುವುದು ಸಹಜ. ಅದರಲ್ಲೂ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಇದು ಜೀವನದ ಪ್ರಮುಖ ಘಟ್ಟವೆಂಬ ಹೆಚ್ಚಾದ ಒತ್ತಡವಿರುತ್ತದೆ. ಈ ಒತ್ತಡದ ನಡುವೆ ಅನೇಕ ವಿದ್ಯಾರ್ಥಿಗಳು ನಂಬಿರುವ ಒಂದು ದೊಡ್ಡ ತಪ್ಪು ಕಲ್ಪನೆಯೆಂದರೆ – ‘ರಾತ್ರಿ ಜಾಗರಣೆ’. ರಾತ್ರಿಯಿಡೀ ಎಚ್ಚರವಿದ್ದು ಓದಿದರೆ ಹೆಚ್ಚು ಅಂಕ ಗಳಿಸಬಹುದು ಎಂಬ ಭ್ರಮೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಫಲಿತಾಂಶ ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.    ನಮ್ಮ ದೇಹವು ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಇದು ‘ಸಿರ್ಕಾಡಿಯನ್ ರಿದಮ್’ (Circadian Rhythm) ಅಥವಾ ಜೈವಿಕ ಗಡಿಯಾರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ರಾತ್ರಿ ಹತ್ತು ಗಂಟೆಯ ನಂತರ ನಮ್ಮ ಮೆದುಳಿನ ಪೀನಲ್ ಗ್ರಂಥಿಯಿಂದ ಮೆಲಟೋನಿನ್ ಎಂಬ ನಿದ್ರೆ ಮಾಡಲು ಪ್ರೇರೇಪಿಸುವ ರಾಸಾಯನಿಕ ಬಿಡುಗಡೆಯಾಗುತ್ತದೆ. ವಿಜ್ಞಾನದ ಪ್ರಕಾರ, ಈ ಸಮಯದಲ್ಲಿ ಬಲವಂತವಾಗಿ ಎಚ್ಚರವಿದ್ದು ಓದಿದಾಗ ಮೆದುಳಿನ ಗ್ರಹಣ ಶಕ್ತಿ (Grasping Power) ಶೇ. 50ಕ್ಕಿಂತಲೂ ಜಾಸ್ತಿ ಕುಸಿಯುತ್ತದೆ. ರಾತ್ರಿ ಓದಿದ ವಿಷಯಗಳು ಕೇವಲ ‘ತಾತ್ಕಾಲಿಕ ನೆನಪಿನ’ (Short-term memory) ಕೋಶದಲ್ಲಿ ಉಳಿಯುತ್ತವೆ. ಪರೀಕ್ಷಾ ಹಾಲ್‌ನಲ್ಲಿ ಒತ್ತಡ ಹೆಚ್ಚಾದಾಗ ಈ ತಾತ್ಕಾಲಿಕ ನೆನಪುಗಳು ಮರೆಯಾಗಿ, ವಿದ್ಯಾರ್ಥಿಗಳು ” ಬ್ಲ್ಯಾಂಕ್”  (blank) ಆಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ರಾತ್ರಿ ಜಾಗರಣೆ = ಶ್ರಮ ಹೆಚ್ಚು + ಕಡಿಮೆ ಫಲಿತಾಂಶ. ನಿದ್ರೆ ಎಂದರೆ ಸಮಯ ವ್ಯರ್ಥ ಮಾಡುವುದಲ್ಲ, ಬದಲಾಗಿ ಅದು ಮೆದುಳಿನ ನಿರ್ವಹಣಾ ಅವಧಿ. ನಿದ್ರೆಯ ಸಮಯದಲ್ಲಿ ಮೆದುಳು ಎರಡು ಮುಖ್ಯ ಕಾರ್ಯಗಳನ್ನು ಮಾಡುತ್ತದೆ:  *ಮಾಹಿತಿ ಕ್ರೋಢೀಕರಣ: ದಿನವಿಡೀ ಓದಿದ ಅಸ್ತವ್ಯಸ್ತ ಮಾಹಿತಿಯನ್ನು ಮೆದುಳು ವಿಂಗಡಿಸಿ, ಅವುಗಳನ್ನು ದೀರ್ಘಕಾಲಿಕ ನೆನಪಿನ ಕೋಶಕ್ಕೆ ರವಾನಿಸುತ್ತದೆ.  * ನರವಿಜ್ಞಾನದ ಶುದ್ಧೀಕರಣ: ಮೆದುಳಿನಲ್ಲಿ ಸಂಗ್ರಹವಾದ ವಿಷಕಾರಿ ಅಂಶಗಳನ್ನು  ಹೊರಹಾಕಿ, ಮರುದಿನ ಹೊಸ ವಿಷಯಗಳನ್ನು ಕಲಿಯಲು ಜಾಗ ಮಾಡಿಕೊಡುತ್ತದೆ. ಶಾಲಾ ಮಕ್ಕಳಿಗೆ 8-9 ಗಂಟೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಠ 7-8 ಗಂಟೆಗಳ ಗಾಢ ನಿದ್ರೆ ಅತ್ಯಗತ್ಯ. ನಿದ್ರೆಯ ಕೊರತೆಯು ಏಕಾಗ್ರತೆಯನ್ನು ಕುಂಠಿತಗೊಳಿಸಿ, ಮರೆಗುಳಿತನಕ್ಕೆ ದಾರಿ ಮಾಡಿಕೊಡುತ್ತದೆ. ಹಿರಿಯರು ಹೇಳುವಂತೆ ” ಬೆಳಗಿನ ಓದು – ಬಂಗಾರದ ಓದು”. ಬೆಳಗಿನ ಜಾವ 5 ರಿಂದ 8 ಗಂಟೆಯವರೆಗಿನ ಸಮಯ ಓದಿಗೆ ಅತ್ಯಂತ ಪ್ರಶಸ್ತ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ: * ಪೂರ್ಣ ನಿದ್ರೆಯ ನಂತರ ಮೆದುಳು ಹಗುರವಾಗಿದ್ದು, ಹೊಸ ಮಾಹಿತಿ ಸ್ವೀಕರಿಸಲು ಸಿದ್ಧವಾಗಿರುತ್ತದೆ. *ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಜಾಸ್ತಿ ಇರುವುದರಿಂದ ಮೆದುಳಿನ ಚುರುಕುತನ  ಹೆಚ್ಚುತ್ತದೆ *ಯಾವುದೇ ಶಬ್ದ ಮಾಲಿನ್ಯ ಅಥವಾ ಅಡೆತಡೆಗಳಿಲ್ಲದ ಕಾರಣ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. ರಾತ್ರಿ 3 ಗಂಟೆ ಓದುವುದಕ್ಕಿಂತ ಬೆಳಗಿನ 1 ಗಂಟೆಯ ಓದು ಹೆಚ್ಚು ಪರಿಣಾಮಕಾರಿ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.     ಓದುವುದಕ್ಕೆ ಕೇವಲ ಶ್ರಮ ಮಾತ್ರವಲ್ಲ, ಕೆಲವು ಜಾಣ  ತಂತ್ರಗಳು ಬೇಕು: ಪೊಮೊಡೊರೊ ತಂತ್ರ (Technique): ಸತತವಾಗಿ ಗಂಟೆಗಟ್ಟಲೆ ಓದಬೇಡಿ. 45 ನಿಮಿಷಗಳ ಏಕಾಗ್ರತೆಯ ಓದಿನ ನಂತರ 10 ನಿಮಿಷಗಳ ವಿರಾಮ ತೆಗೆದುಕೊಳ್ಳಿ. ಈ ಸಮಯದಲ್ಲಿ ಕಣ್ಣುಗಳಿಗೆ ವಿಶ್ರಾಂತಿ ನೀಡಿ, ನೀರು ಕುಡಿಯಿರಿ ಅಥವಾ ಸ್ವಲ್ಪ ಅತ್ತಿತ್ತ ಓಡಾಡಿ. *ಸಕ್ರಿಯ ಮರುಸ್ಮರಣೆ : ಓದಿದ್ದನ್ನು ಹಾಗೆಯೇ ಬಿಡದೆ, ಪುಸ್ತಕ ಮುಚ್ಚಿ ನೆನಪಿಸಿಕೊಳ್ಳಲು ಪ್ರಯತ್ನಿಸಿ. ಒಂದು ಬಿಳಿ ಹಾಳೆಯ ಮೇಲೆ ಪ್ರಮುಖ ಅಂಶಗಳನ್ನು ಬರೆದು ನೋಡಿ. ಇದು ನೆನಪಿನ ಶಕ್ತಿಯನ್ನು ಗಟ್ಟಿಗೊಳಿಸುತ್ತದೆ. *ಡಿಜಿಟಲ್ ಡಿಟಾಕ್ಸ್: ಮೊಬೈಲ್ ಫೋನ್ ಪರೀಕ್ಷೆಯ ಸಮಯದಲ್ಲಿ ನಿಮ್ಮ ದೊಡ್ಡ ಶತ್ರು. ಓದುವ ಸಮಯದಲ್ಲಿ ಮೊಬೈಲ್ ಅನ್ನು ಬೇರೆ ಕೋಣೆಯಲ್ಲಿಡಿ. ಸಾಮಾಜಿಕ ಜಾಲತಾಣಗಳ ಒಂದು ನೋಟಿಫಿಕೇಶನ್ ನಿಮ್ಮ ಇಪ್ಪತ್ತು ನಿಮಿಷಗಳ ಅಮೂಲ್ಯ ಏಕಾಗ್ರತೆಯನ್ನು ಕಸಿದುಕೊಳ್ಳಬಲ್ಲದು. ಎಚ್ಚರವಿರಲು ಅತಿಯಾಗಿ ಕಾಫಿ ಅಥವಾ ಟೀ ಕುಡಿಯಬೇಡಿ. ಇದರಲ್ಲಿರುವ ಕೆಫೀನ್ ಅಂಶವು ಆತಂಕ  ಮತ್ತು ಅಸ್ಥಿರತೆಯನ್ನು ಹೆಚ್ಚಿಸಿ, ನಿದ್ರಾಹೀನತೆಗೆ ಕಾರಣವಾಗಬಹುದು. ಎನರ್ಜಿ ಡ್ರಿಂಕ್ಸ್ ಬದಲಿಗೆ ಬಿಸಿ ಹಾಲು, ಮಜ್ಜಿಗೆ, ಅಥವಾ ಹಣ್ಣಿನ ರಸ ಸೇವಿಸಿ. ರಾತ್ರಿ ಲಘು ಆಹಾರ ಸೇವಿಸುವುದು ಮರುದಿನ ಬೆಳಿಗ್ಗೆ ಬೇಗ ಏಳಲು ಮತ್ತು ಮಂಕುತನ ತಪ್ಪಿಸಲು ಸಹಕಾರಿ. ಪೋಷಕರೇ, ಮಕ್ಕಳ ಯಶಸ್ಸಿನಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಪ್ರತಿಯೊಬ್ಬ ಮಗುವಿನ ಬುದ್ಧಿಶಕ್ತಿ ಮತ್ತು ಕಲಿಯುವ ವೇಗ ಭಿನ್ನವಾಗಿರುತ್ತದೆ. ಪಕ್ಕದ ಮನೆಯ ಮಕ್ಕಳೊಂದಿಗೆ ಹೋಲಿಸಿ ಮಾನಸಿಕ ಒತ್ತಡ ಹೇರಬೇಡಿ. ಅಂಕಗಳೇ ಜೀವನದ ಅಂತಿಮ ಗುರಿಯಲ್ಲ. “ನೀನು ಪ್ರಾಮಾಣಿಕವಾಗಿ ಪ್ರಯತ್ನಿಸು, ನಾವು ನಿನ್ನ ಜೊತೆಗಿದ್ದೇವೆ” ಎಂಬ ಧೈರ್ಯದ ಮಾತುಗಳು ಮಗುವಿನಲ್ಲಿ ಆತ್ಮವಿಶ್ವಾಸ ತುಂಬುತ್ತವೆ. ಪರೀಕ್ಷೆ ಎನ್ನುವುದು ಜೀವನದ ಒಂದು ಪುಟ್ಟ ಹಂತವಷ್ಟೇ ಹೊರತು ಅದುವೇ ಜೀವನವಲ್ಲ. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮೆದುಳು ಇರಲು ಸಾಧ್ಯ. ಶಾಂತಿಯುತ ಮನಸ್ಸು ಪರೀಕ್ಷೆಯಲ್ಲಿ ಯಶಸ್ಸು ನೀಡುತ್ತದೆಯೇ ಹೊರತು, ಕಣ್ಣು ಕೆಂಪಗಾಗಿಸುವ ರಾತ್ರಿಯ ನಿದ್ದೆ ಕೆಡುವಿಕೆಯಲ್ಲ. ಜಾಗರಣೆ ವಿದ್ಯಾರ್ಥಿಯನ್ನು ಸೋಲಿಸಿದರೆ, ಬೆಳಗಿನ ಜಾಗೃತಿಯು ವಿದ್ಯಾರ್ಥಿಯನ್ನು ಗೆಲ್ಲಿಸಿ ವಿಜಯದ ಪಥದತ್ತ ಕೊಂಡೊಯ್ಯುತ್ತದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. (ಬರಹ : ಡಾ.ಕೆ.ಬಿ.ಸೂರ್ಯಕುಮಾರ್)

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ ಮಾ.13 NEWS DESK : ಶಿಕ್ಷಣವೇ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಶಿಕ್ಷಣ ಪಡೆದ ಮಹಿಳೆ ಕುಟುಂಬದ ಅಭಿವೃದ್ಧಿಗೆ…

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*

ಮಾರ್ಚ್ 13, 2026

*ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*

ಮಾರ್ಚ್ 13, 2026

*ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆಗೆ ಪ್ರಶಸ್ತಿಯ ಗರಿ*

ಮಾರ್ಚ್ 13, 2026

*ವನ್ಯಜೀವಿಗಳ ಉಪಟಳ ತಡೆಗೆ ಆಗ್ರಹ : ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ ಯತ್ನ : ಹೆದ್ದಾರಿ ತಡೆದು ಪ್ರತಿಭಟನೆ*

ಮಾರ್ಚ್ 13, 2026

*ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನ : ಕಿಡಿಗೇಡಿಯ ಬಂಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹ*

ಮಾರ್ಚ್ 13, 2026

*ಕಾಡಾನೆ ದಾಳಿ : ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*

ಮಾರ್ಚ್ 13, 2026

*ಕುಶಾಲನಗರ : ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ವನಿತಾ ಚಂದ್ರಮೋಹನ್*

ಮಾರ್ಚ್ 11, 2026

*ಕುಶಾಲನಗರ : ರಾಜಿ ಪ್ರಕರಣಗಳ ಮೂಲಕ ನ್ಯಾಯಾಧೀಶರ ಒತ್ತಡ ಕಡಿಮೆಯಾಗಲಿದೆ : ಹಿರಿಯ ಸಿವಿಲ್ ನ್ಯಾಯಾಧೀಶೆ : ಶುಭ*

ಮಾರ್ಚ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.