ಮಡಿಕೇರಿ ಮೇ 4 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಪರ ನಗರದ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಯಿತು.
ನಗರದ ಬೂತ್ ನಂಬರ್ 210 ರಲ್ಲಿ ಬೂತ್ ಅಧ್ಯಕ್ಷ ಶಾ ಹಾಗೂ ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರೌವೂಫ್ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಿ ಮಂತರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಎಂ.ಎನ್.ರೌವೂಫ್ ಮಡಿಕೇರಿ ಕ್ಷೇತ್ರದ ಜನತೆ ಮಂತರ್ ಗೌಡ ಅವರ ಒಲವು ತೋರುತ್ತಿದ್ದು, ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ಕೊಡಗು ವೀಕ್ಷಕರಾದ ಹಸೀನ ಬಾನು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಬೂತ್ ಬಿ ಎಲ್ ಎ ಹಾಗೂ ಸೇವಾದಳದ ಪ್ರಮುಖರಾದ ಹಬೀಬ್, ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯಶ್ ದೋಳ್‌ಪಾಡಿ, ಮಾಜಿ ಉಪಾಧ್ಯಕ್ಷ ಮೋಹನ್, ಬ್ಲಾಕಿನ ಪ್ರಮುಖರಾದ ಸುಹೇಲ್, ಯೂನುಸ್, ರಿಯಾಜ್, ಅಲ್ಪಸಂಖ್ಯಾತ ಘಟಕದ ಫಾರೂಕ್, ಸೇವಾದಳದ ಅಜೀಜ್, 210 ಬೂತ್ ಸಮಿತಿಯ ಸದಸ್ಯರಾದ ಪರದೀನ್, ತಬರೇಸ್, ಬೆಂಬಲಿಗರಾದ ಸಿನಾನ್, ಹಾಯತ್ ಹಾಗೂ ಜೀವಿತ್ ಹಾಜರಿದ್ದರು.









