ಮಡಿಕೇರಿ ಮೇ 3 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ 6 ನೇ ವರ್ಷದ ಗೌಡ ಕುಟುಂಬಗಳ ನಡುವಣ “ಗೌಡ ಫುಟ್ಬಾಲ್ ಟ್ರೋಫಿ 2023” ಪಂದ್ಯಾವಳಿ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇದೇ ಮೇ 4 ರಿಂದ 14 ರವರೆಗೆ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಅಕಾಡೆಮಿಯ ಅಧ್ಯಕ್ಷ ದುಷ್ಯಂತ್ ಬಡುವಂಡ್ರ ತಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದೆ. ಒಟ್ಟು 64 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಸುಮಾರು 4 ಸಾವಿರ ಪ್ರೇಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಮುಕ್ಕಾಟಿ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಪಡಿಕಲ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
::: ಮೇ 4 ರ ಪಂದ್ಯಗಳು :::
ಮುಕ್ಕಾಟಿ ‘ಎ’ ಮತ್ತು ಕಾಯರ್ತೋಡಿ
ಕೊಂಬಂಡ ಮತ್ತು ಕಾನಡ್ಕ
ಮಗೇರನಾ ಮತ್ತು ಪಾರೇರ
ಯಾಲದಾಳು ಮತ್ತು ಬಾರಿಕೆ
ಪಟ್ಟೆಮನೆ ಮತ್ತು ಬಡುವಂಡ್ರ
ಉಡುದೊಳಿರ ಮತ್ತು ಪರಿಚನ
ಬೈಲೆ ಮತ್ತು ಉಳುವಾರನ










