ಮಡಿಕೇರಿ ಮೇ 3 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾದರು.
ಹಿರಿಯರಾದ ಬೊಟ್ಟೋಳಂಡ ಮಿಟ್ಟು ಚೆಂಗಪ್ಪ ಅವರ ನಿವಾಸದಲ್ಲಿ ಭೇಟಿಯಾದ ನಾಚಪ್ಪ ಹಾಗೂ ಹರಿಪ್ರಸಾದ್ ಕೊಡವಲ್ಯಾಂಡ್ ಜಿಯೋ-ರಾಜಕೀಯದ ಬಹುಕಾಲದ ಬೇಡಿಕೆಯ ಕುರಿತು ಚರ್ಚಿಸಿದರು.









