ಮಡಿಕೇರಿ ಮೇ 4 : ಬಿಜೆಪಿಯ ವಿರುದ್ಧ ಗೆಲುವು ಸಾಧಿಸಬಲ್ಲ ಜಾತ್ಯತೀತ ನಿಲುವಿನ ಪಕ್ಷವನ್ನು ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷ ಬೆಂಬಲಿಸಲಿದೆಯೆoದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್.ಮಂಜುನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಪ್ಯಾಸಿಸ್ಟ್ ಕೋಮುವಾದಿ ಚಿಂತನೆಗಳನ್ನು ಹೊಂದಿರುವ ಪಕ್ಷದ ಆಡಳಿತದಿಂದ ಶ್ರೀಸಾಮಾನ್ಯರ, ಮಹಿಳೆೆಯರ, ರೈತರು, ಕಾರ್ಮಿಕ ವರ್ಗದ ಸಂಕಷ್ಟಗಳಿಗೆ ಕಿವಿಯಾಗುವವರು ಯಾರು ಇಲ್ಲ ಎನ್ನುವ ಪರಿಸ್ಥಿತಿ ನಿಮಾರ್ಣವಾಗಿದೆ. ನಿರುದ್ಯೋಗದ ಸಮಸ್ಯೆಯಿಂದ ಯುವ ಸಮೂಹ ತತ್ತರಿಸಿದ್ದು, ದುಶ್ಚಟಗಳಿಗೆ ಬಲಿಯಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಕೂಡಿಗೆಯ ಭುವನಗಿರಿ ಎಂಬಲ್ಲಿ, ಅತ್ಯಂತ ಜೀರ್ಣಾವಸ್ಥೆಯಲ್ಲಿರುವ ಮನೆಯಲ್ಲಿ ಬದುಕು ಸವೆಸುತ್ತಿರುವ ಶತಾಯುಷಿ ವೃದ್ಧೆಯಿಂದ ಮತಹಾಕಿಸಲು ಆಡಳಿತ ವ್ಯವಸ್ಥೆ ಸ್ಥಳಕ್ಕೆ ತೆರಳಿದೆ. ಆ ವೃದ್ಧೆ ವಾಸವಿರುವ ಪರಿಸ್ಥಿತಿಗಳು, ಆಕೆಯ ಅಸಹಾಯಕತೆಗಳು ಇಲ್ಲಿ ಗೌಣವಾಗಿದೆ. ಪ್ರಸ್ತುತ ಓಟು ಮಾತ್ರ ಮುಖ್ಯವಾಗಿದ್ದು, ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಜಾತಿ ಮತ ಧರ್ಮಗಳ ವಿಚಾರವೆತ್ತಿ, ಭಾವನೆಗಳನ್ನು ಕೆದಕುವ ರಾಜಕಾರಣವಷ್ಟೆ ಇಂದು ಕಾಣುತ್ತಿದೆ. ಜನರಿಗೆ ಯೋಗ್ಯ ಬದುಕನ್ನು ಕಟ್ಟಿಕೊಡುವ ಕೆಲಸ ನಡೆಯುತ್ತಿಲ್ಲ. ದೊರಕಿದ ಅಧಿಕಾರದ ಅವಧಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿದಲ್ಲಿ, ಚುನಾವಣಾ ಹಂತದಲ್ಲಿ ಮನೆಬಾಗಿಲಿಗೆ ತೆರಳಿ ಮತ ಕೇಳುವ ಅಗತ್ಯ ಬರುವುದಿಲ್ಲ. ಜನರೇ ಆಶೀರ್ವದಿಸುತ್ತಾರೆಂದು ಸೂಕ್ಷ್ಮವಾಗಿ ನುಡಿದ ಅವರು, ಮತಕ್ಕಾಗಿ ನೋಟು ಕೊಟ್ಟು ಬದುಕನ್ನು ಮೂರಾಬಟ್ಟೆ ಮಾಡುವ ವ್ಯವಸ್ಥೆ ಕಾಣುತ್ತಿರುವುದು ವಿಷಾದನೀಯವೆಂದರು.
ಭಾವನೆಗಳನ್ನು ಕೆರಳಿಸುವ ಬಿಜೆಪಿಯನ್ನು ಸೋಲಿಸುವ ಮೂಲಕ ಸಂವಿಧಾನವನ್ನು ಉಳಿಸುವ ಅಗತ್ಯತೆ ಇಂದು ನಮ್ಮ ಮುಂದಿದೆ. ಜಾತ್ಯತೀತ ಚಿಂತನೆಯ ಪಕ್ಷವನ್ನು ಬೆಂಬಲಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕೆಂದು ಕರೆ ನೀಡಿದರು.
ಸುದೀರ್ಘಾವಧಿಯಿಂದ ಜಿಲ್ಲೆಯನ್ನು ಕಾಡುತ್ತಿರುವ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು, ನಿತ್ಯೋಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು, ಗ್ಯಾಸ್-ಪೆಟ್ರೋಲ್ ದರ ಹೆಚ್ಚಳ ಇದೇ ಈ ಸರ್ಕಾರದ ಪ್ರಗತಿಯೆಂದು ಮಂಜುನಾಥ್ ಲೇವಡಿ ಮಾಡಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಹೆಚ್.ಇ.ಸಣ್ಣಪ್ಪ ಮಾತನಾಡಿ, ಬಿಜೆಪಿ ಸರ್ಕಾರ ನಿರೀಕ್ಷೆಯ ಅಭಿವೃದ್ಧಿ ಕಾರ್ಯಗಳನ್ನು ನಡೆಸದೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎನ್.ಟಿ. ಚಂಗಪ್ಪ, ಹೆಚ್.ಜಿ.ಜಯಣ್ಣ ಹಾಗೂ ಕುಶಾಲನಗರ ಹೋಬಳಿ ಘಟಕದ ಸದಸ್ಯ ಹೆಚ್.ಎಸ್.ರಾಕೇಶ್ ಉಪಸ್ಥಿತರಿದ್ದರು.
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*