ಮಡಿಕೇರಿ ಮೇ 5 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎ ಮನ್ಸೂರ್ ಅಲಿ ಎಮ್ಮೆಮಾಡುವಿನಲ್ಲಿ ಪ್ರಚಾರ ಸಭೆಯ ಮೂಲಕ ಮತಯಾಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಮನ್ಸೂರ್ ಅಲಿ, ರಾಷ್ಟ್ರೀಯ ಪಕ್ಷಗಳು ಹಣ ಬಲದಿಂದ ಚುನಾವಣೆ ಎದುರಿಸುತ್ತಿದೆ.
ಆದರೆ ಜೆಡಿಎಸ್ ಪಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.
ರಾಷ್ಟ್ರೀಯ ಪಕ್ಷಗಳಿಗೆ ಜಿಲ್ಲೆಯ ಜನತೆ ಅಧಿಕಾರ ನೀಡಿದರು ಸಹಾ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ದೂರಿದರು.
ಅಲ್ಪಸಂಖ್ಯಾತರ ಏಳಿಗೆಗೆ ಯಾವುದೇ ಯೋಜನೆಗಳನ್ನು ರೂಪಿಸದೇ, ಕೇವಲ ಧರ್ಮಗಳ ಮಧ್ಯದಲ್ಲಿ ವಿಷ ಬೀಜ ಬಿತ್ತುವ ಪಕ್ಷಗಳಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಬರಲಿದ್ದು, ಎಚ್.ಡಿ ಕುಮಾರಸ್ವಾಮಿ ಅಧಿಕಾರ ಬರಲಿದ್ದಾರೆ ಎಂದು ವಿರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎ ಮನ್ಸೂರ್ ಅಲಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರಚಾರ ಸಭೆಯಲ್ಲಿ ಕಾಳೇರ ಆಲಿ, ಹಸೈನಾರ್, ಹಾರಿಸ್, ದಾವೂದ್, ಝಕರಿಯಾ, ಆಸಿಫ್, ಅಬ್ಬಾಸ್ ಹಾಗೂ ಎಮ್ಮೆಮಾಡು ಭಾಗದ ಜೆಡಿಎಸ್ ಕಾರ್ಯಕರ್ತರು ಇದ್ದರು.