ಮಡಿಕೇರಿ ಮೇ 5 : ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಹಾಗೂ ರೋಟರ್ಯಾಕ್ಟ್ ಕ್ಲಬ್ ಪದವಿ ಕಾಲೇಜು ಮೂರ್ನಾಡು ಸಹಯೋಗದಲ್ಲಿ ಮೇ 6 ರಂದು ಬೆಳಗ್ಗೆ 8 ಗಂಟೆಗೆ ಮತದಾನ ಮಹತ್ವ ಸಾರುವ ಮ್ಯಾರಥಾನ್ ಆಯೋಜಿಸಲಾಗಿದೆ.
ಮೇ, 6 ರಂದು ಬೆಳಗ್ಗೆ 8 ಗಂಟೆಗೆ ಮೂರ್ನಾಡು ರಸ್ತೆಯ ಎಚ್.ಪಿ.ಪೆಟ್ರೋಲ್ ಬಂಕ್ ಬಳಿಯಿಂದ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದವರೆಗೆ ಮತದಾನ ಮಹತ್ವ ಸಾರುವ ಮ್ಯಾರಥಾನ್ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್. ಆಕಾಶ್ ಪಾಲ್ಗೊಳ್ಳಲಿದ್ದಾರೆ.
ಸಾರ್ವಜನಿಕರು, ಕ್ರೀಡಾಪಟುಗಳು, ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಮತದಾನದ ಮಹತ್ವದ ಸಂದೇಶವನ್ನು ಮ್ಯಾರಥಾನ್ ಮೂಲಕ ತಿಳಿಸಬೇಕೆಂದು ಮೂರ್ನಾಡು ಪದವಿ ಕಾಲೇಜಿನ ರೋಟರ್ಯಾಕ್ಟ್ ಪ್ರಮುಖರು ಕೋರಿದ್ದಾರೆ.
ಸ್ಪರ್ಧಾರ್ಥಿಗಳು ಮೇ, 6 ರಂದು ಬೆಳಗ್ಗೆ 7.30 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು ಕೊನೆ ದಿನ ಮೇ, 5 ರ ಸಂಜೆ 6 ಗಂಟೆಯಾಗಿದೆ. ನೋಂದಣಿಗೆ ಕರೆ ಮಾಡಬೇಕಾದ ಸಂಖ್ಯೆ- 9110874244, 9481589533.









