ಮಡಿಕೇರಿ ಮೇ 5 : ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 10 ರಂದು ನಡೆಯುತ್ತಿರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರ ಪಾಲ್ಗೊಂಡು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ಎಲ್ಲರೂ ಮತದಾನ ಮಾಡಲೇಬೇಕೆಂದು ಪ್ರೇರಣೆ ನೀಡುವ ಉದ್ದೇಶದಿಂದ ಮತದಾನ ಮಾಡಿದ ಪ್ರವಾಸಿಗರಿಗೆ ಮಡಿಕೇರಿ ತಾಲ್ಲೂಕಿನ ಇಬ್ನಿವಳವಾಡಿ ಗ್ರಾಮದ ಇಬ್ಬನಿ ಸ್ಪ್ರಿಂಗ್ ರೆಸಾರ್ಟ್ ನಲ್ಲಿ ತಂಗುವ ಶುಲ್ಕದಲ್ಲಿ ಶೇ.20 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ರೆಸಾರ್ಟ್ನ ಮಾಲೀಕ ಚೆಯ್ಯಂಡ ಸತ್ಯ ಗಣಪತಿ ತಿಳಿಸಿದ್ದಾರೆ.
ಪ್ರತಿ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರ ಪ್ರಭುವಾಗಿರುತ್ತಾನೆ. ಮತದಾನ ಮಾಡದೆ ನಿರ್ಲಕ್ಷ್ಯ ವಹಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜೆಗಳೇ ಪ್ರಭುಗಳು ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ. ಮತದಾನ ಮಾಡಿ ರೆಸಾರ್ಟ್ ಗೆ ಆಗಮಿಸಿ ತಂಗುವ ಪ್ರವಾಸಿಗರಿಗೆ ಮೇ 10 ರಂದು ಶೇ.20 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ರೆಸಾರ್ಟ್ ಗೆ ಬರುವವರು ಮತದಾನ ಮಾಡಿದ ಕುರಿತು ಬೆರಳಿನ ಗುರುತನ್ನು ತೋರಿಸಿ ಖಾತ್ರಿ ಪಡಿಸಬೇಕೆಂದು ಸತ್ಯ ಹೇಳಿದ್ದಾರೆ.









