ಮಡಿಕೇರಿ ಮೇ 5 : ಮಡಿಕೇರಿ ಕ್ಷೇತ್ರದ ಸಮೃದ್ಧ ಭವಿಷ್ಯಕ್ಕಾಗಿ ಸುಸ್ಥಿರ ಯೋಜನೆಯ ಪರಿಕಲ್ಪನೆಯೊಂದಿಗೆ ‘ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್’ ಪ್ರಮುಖ ಅಂಶಗಳನ್ನು ಒಳಗೊಂಡ ಮಡಿಕೇರಿ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಬಿಡುಗಡೆಗೊಳಿಸಿದರು,
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಭ್ಯರ್ಥಿ ಅಪ್ಪಚ್ಚು ರಂಜನ್, ಮಡಿಕೇರಿ ಕ್ಷೇತ್ರದ 24 ಗ್ರಾಮಗಳನ್ನು ಒಳಗೊಂಡ ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ. ಮಡಿಕೇರಿ ಕ್ಷೇತ್ರದಾದ್ಯಂತ ಇರುವ ಪ್ರವಾಸಿ ಮತ್ತು ಧಾಮಿಕ ಕ್ಷೇತ್ರಗಳನ್ನು ಒಳಗೊಂಡ ಟೂರಿಸಂ ಕಾರಿಡಾರ್ ಇದಾಗಿರಲಿದೆ ಎಂದರು.
ಮಡಿಕೇರಿ, ಕೆ.ನಿಡುಗಣೆ ಭಾಗಮಂಡಲ, ತಲಕಾವೇರಿ, ಕೆ.ನಿಡುಗಣಿ, ಗಾಳಿಬೀಡು, ಗರ್ವಾಲೆ, ಕಿರಗಂದೂರು, ಬೆಟ್ಟದಳ್ಳಿ, ಶಾಂತಳ್ಳಿ, ಸಕಲೇಶಪುರ, ಹಾನಗಲ್ಲು, ಚೌಡ್ಲು , ಸೋಮವಾರಪೇಟೆ, ದೊಡ್ಡಮಳ್ತೆ, ಗೌಡಳ್ಳಿ, ಶನಿವಾರಸಂತೆ, ನಿಡ್ತ, ತೊರೆನೂರು, ಹೆಬ್ಬಾಲೆ, ಕೂಡು ಮಂಗಳೂರು, ಕುಶಾಲನಗರ, ಗುಡ್ಡೆಹೊಸೂರು, ನಂಜರಾಯಪಟ್ಟಣ, ನಾಕೂರು ಶಿರಂಗಾಲ, ಕಂಬಿಬಾಣೆ ಸೇರಿದಂತೆ ಮಡಿಕೇರಿ ಕ್ಷೇತ್ರದ ಹಲವು ಗ್ರಾಮಗಳಲ್ಲಿನ ಪ್ರವಾಸೋದ್ಯಮ ತಾಣಗಳನ್ನು ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮತ್ತು ಪಂಚಾಯ್ತಿಗಳ ಆದಾಯ ಹೆಚ್ಚಳವಾಗಲಿದೆ ಎಂದರು.
ರಸ್ತೆ ಮಿನಿ ಏರ್ ಪೋರ್ಟ್ : ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಮತ್ತು ಸಂಪರ್ಕಕ್ಕೆ ಪ್ರಣಾಳಿಕೆಯಲ್ಲಿ ಒತ್ತು ನಿಡಲಾಗಿದೆ. ಚನ್ನರಾಯಪಟ್ಟಣ-ಮಾಕುಟ್ಟ, ಕುಶಾಲನಗರದಿಂದ ಸೋಮವಾರಪೇಟೆಯ ಮೂಲಕ ಶಾಂತಳ್ಳಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದಿಯೊಂದಿಗೆ, ಕುಶಾಲನಗರದಲ್ಲಿ ಮಿನಿ ಏರ್ ಪೋರ್ಟ್ ನಿರ್ಮಾಣ ನಮ್ಮ ಗುರಿಯಾಗಿದೆಯೆಂದು ತಿಳಿಸಿದರು.
ಶಾಂತಳ್ಳಿಯಲ್ಲಿ ‘ತೋಟಗಾರಿಕಾ ಸಂಶೋಧನಾ ಕೇಂದ್ರ’ ಮತ್ತು ಶನಿವಾರ ಸಂತೆಯಲ್ಲಿ ‘ಹಸಿಮೆಣಸು ಮತ್ತು ಹೂವು ಸಂಸ್ಕರಣಾ ಘಟಕ’ ಸ್ಥಾಪನೆಗೆ ಆದ್ಯತೆ, ಕೊಡ್ಲಿಪೇಟೆಯಲ್ಲಿ ಕುಕ್ಕುಟೋದ್ಯಮ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ‘ಗೋಶಾಲೆ’ಗಳ ನಿರ್ಮಾಣ, ಬಯಲು ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆಗಳ ಪುನರುಜ್ಜೀವನ ಹಾಗೂ ಮಳೆ ನೀರು ಸಂಗ್ರಹ ಯೋಜನೆಗಳಿಗೆ ಅನುದಾನ, ಸಿಎನ್ಡಿ ಲ್ಯಾಂಡ್ ಮತ್ತು ಕೃಷಿ ಚಟುವಟಿಕೆ ನಡೆಸುತ್ತಿರುವ ಭೂಪ್ರದೇಶ ಸಕ್ರಮಗೊಳಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆಂದು ಮಾಹಿತಿಯನ್ನಿತ್ತರು.
ಕಾನೂನು ಪದವಿ ಕಾಲೇಜು : ಮಡಿಕೇರಿಯಲ್ಲಿ ಸರ್ಕಾರಿ ಕಾನೂನು ಪದವಿ ಕಾಲೇಜು ಪ್ರಾರಂಭಕ್ಕೆ ಆದ್ಯತೆಯನ್ನು ಪ್ರಣಾಳಿಕೆಯನ್ನು ನೀಡಲಾಗಿದೆಯೆಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ, ಕ್ಷೇತ್ರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಕ್ಷೇತ್ರದ ಕಾರ್ಮಿಕರ ಹಿತಕ್ಕಾಗಿ ಕೂಡಿಗೆಯಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದೆಂದರು.
ಕೊಡಗು ಉತ್ಸವ- ಹಂಪಿ ಮತ್ತು ಜೋಗ ಜಲಪಾತ ಉತ್ಸವದ ಮಾದರಿಯಲ್ಲೇ ಕೊಡಗಿನ ನೆಲ, ಜಲ, ಭಾಷೆ ವೈವಿಧ್ಯ, ಸಂಸ್ಕೃತಿಯ ಜೊತೆಗೆ ಸಾಂಪ್ರದಾಯಿಕ ಮತ್ತು ಜಾನಪದ ವೈಶಿಷ್ಟ್ಯಗಳ ‘ಕೊಡಗು ಉತ್ಸವ’ ಆಯೋಜನಗೆ ಒತ್ತು ನೀಡಲಾಗುತ್ತದೆಂದರು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಕ್ರೀಡಾ ವಸತಿ ಶಾಲೆ, ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಮತ್ತು ಈಜು ಕೊಳ ಹಾಗೂ ಸ್ಕೇಟಿಂಗ್ ಅಂಗಣ ಸ್ಥಾಪನೆ ಮಾಡುವ ಬಗ್ಗೆಯೂ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಬಿ.ಬಿ.ಭಾರತೀಶ್, ಡಾ.ಬಿ.ಸಿ.ನವೀನ್ ಕುಮಾರ್, ನಾಪಂಡ ರವಿಕಾಳಪ್ಪ, ಮಹೇಶ್ ಜೈನಿ, ಮನುಮಂಜುನಾಥ್ ಹಾಜರಿದ್ದರು.
Breaking News
- *ಭಾಗಮಂಡಲ : ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು : ಸಿಎಂ*
- *ರೂ.1.50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಗೆ ಮನವಿ ಸಲ್ಲಿಸಿದ ಮುದ್ದಂಡ ಹಾಕಿ ಉತ್ಸವ ಸಮಿತಿ*
- *ಅರ್ಚಕರ ಮೇಲೆ ಹಲ್ಲೆ : ಹೋರಾಟದ ಎಚ್ಚರಿಕೆ ನೀಡಿದ ವಿಶ್ವ ಹಿಂದು ಪರಿಷತ್ ಮಠ-ಮಂದಿರ್ ಘಟಕ*
- *ಫೆ.7 ರ ಪಾದಯಾತ್ರೆಗೆ ಸಿಎನ್ಸಿ ಬೆಂಬಲ*
- *ಕೊಡಗು : ಕಾರ್ಮಿಕರ ಸಾಮಾಜಿಕ ಭದ್ರತಾ ಕುರಿತು ಜನಜಾಗೃತಿ : ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ*
- *ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಟ್ ಬಿಡುಗಡೆ*
- *ಕೊಡಗಿಗೆ ಸಚಿವ ಸ್ಥಾನ ನೀಡಲು ಒತ್ತಾಯ*
- *ಮರಗೋಡಿನಲ್ಲಿ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್*
- *ತಲಕಾವೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ : ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ : ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ*