ಮಡಿಕೇರಿ ಮೇ 5 : ಭಾಗಮಂಡಲ ಸಮೀಪದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಗೆಲುವಿಗಾಗಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಪೊನ್ನಣ್ಣ ಅವರ ಸಹೋದರ ನರೇನ್ ಕಾರ್ಯಪ್ಪ ಮತ್ತು ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ವಿಶೇಷ ಪ್ರಾರ್ಥನೆ ನೆರವೇರಿಸಿದರು.
ದೇವಾಲಯದ ಮುಖ್ಯಸ್ಥರಾದ ಗಣೇಶ್ ಶ್ರೀನಿವಾಸ್, ಚರಣ್ ಕುಮಾರ್, ಸುಜಯ್ ನೇತೃತ್ವದಲ್ಲಿ ಪೂಜೆ ನಡೆಯಿತು.
ಈ ಸಂದರ್ಭ ಪ್ರಮುಖರಾದ ಮಂಗೇರಿರ ಜಗದೀಶ್, ಪ್ರೇಮ್ ಕುಮಾರ್ ಮನು, ದೀಪಕ್, ಕೆದಂಬಾಡಿ ರಮೇಶ್, ಹರೀಶ್ ಕುಮಾರ್, ವಿಶು ಪ್ರವೀಣ್ ಕುಮಾರ್, ದೊಡ್ಡೇರ ರಘು, ಹೇಮರಾಜು, ಶಿವಕುಮಾರ್, ಕೀರ್ತಿ ಉತ್ತಪ್ಪ, ಹಾರೀಶ್, ವೇಣುಗೋಪಾಲ್ ಸರು, ಬಾಚಿಮಂಡ ಲವ ಚಿಣ್ಣಪ್ಪ, ಕರಣ್ ಕಾರ್ಯಪ್ಪ ಹಾಗೂ ಮತ್ತಿತರರು ಹಾಜರಿದ್ದರು.









