ಮಡಿಕೇರಿ ಮೇ 6 : ಆಮ್ ಆದ್ಮಿ ಪಕ್ಷದ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಿ.ಎಸ್.ರವೀಂದ್ರ ಪರವಾಗಿ ವಿ.ಬಾಡಗ, ಬಾಳೆಲೆ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಯಿತು.
ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕುಂದಾ, ವಿ.ಬಾಡಗ, ರುದ್ರಗುಪ್ಪೆ, ದೇವರಪುರ, ತಿತಿಮತಿ, ಮಲ್ಲೂರು, ಬಾಳೆಲೆ, ಕಾನೂರು ಕಡೆಗಳ ಮನೆ ಮನೆಗೆ ತೆರಳಿ ಪಕ್ಷದ ಯೋಜನೆಗಳ ಕರಪತ್ರವನ್ನು ನೀಡಿ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡಿದರು.
ಈ ಸಂದರ್ಭ ಅಭ್ಯರ್ಥಿ ಸಿ.ಎಸ್.ರವೀಂದ್ರ ಮಾತನಾಡಿ, ಈಗಾಗಲೇ ಜಿಲ್ಲೆಯ ಹಲವೆಡೆ ಬಿರುಸಿನ ಪ್ರಚಾರ ನಡೆದಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಈ ಬಾರಿ ಬದಲಾವಣೆ ಬಯಸುತ್ತಿರುವ ಮತದಾರರು ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.








