ಮಡಿಕೇರಿ ಮೇ 6 : ಮಡಿಕೇರಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪಿ.ಕೆ.ಬೋಪಣ್ಣ ಪರವಾಗಿ ನಗರದ ವಿವಿಧೆಡೆ ಬಿರುಸಿನ ಮತ ಪ್ರಚಾರ ನಡೆಯಿತು.
ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ನಗರದ ಕನ್ನಿಕ ಲೇಔಟ್, ಸುಬ್ರಹ್ಮಣ್ಯ ನಗರ, ಡೈರಿ ಲೇಔಟ್, ಗಾಳಿಬೀಡು ರಸ್ತೆ, ಎಫ್‍ಎಂಸಿ ಕಾಲೇಜು ರಸ್ತೆ ಕಡೆಗಳಲ್ಲಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ತಿಳಿಸಿ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಕೆ.ಪಿ.ಬೋಪಣ್ಣ ಕೊಡಗಿನ ವಿವಿಧೆಡೆ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಎರಡು ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷದ ವತಿಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮತದಾರರು ತನಗೆ ಮತ ನೀಡಿ ಗೆಲ್ಲಿಸಿದ್ದಲ್ಲಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಪ್ರಮುಖರಾದ ಮುರಳಿ, ಕಲ್ಯಾಣಿ, ಶಿಲ್ಪ ಬೋಪಣ್ಣ, ಥೋಮಸ್ ಮತ್ತು ಇತರರು ಈ ಸಂದರ್ಭ ಹಾಜರಿದ್ದರು.