ಮಡಿಕೇರಿ ಮೇ 6 : ಮಿನಿ ವಿಮಾನಗಳ ಸಂಗ್ರಹದೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿತ್ತು. ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮತ್ತು ಜಿ.ಪಂ.ಸಿಇಒ ಜತೆಯೂ ಫೋಟೋ ತೆಗೆಸಿಕೊಳ್ಳಲು ಗ್ರಾಮಸ್ಥರು ಮುಗಿಬಿದ್ದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಿನಿ ವಿಮಾನಗಳ ಫೋಟೋವನ್ನು ತಮ್ಮ ಕ್ಯಾಮರದಲ್ಲಿ ತೆಗೆಯುವುದರ ಜೊತೆಗೆ ಸಾರ್ವಜನಿಕರ ಫೋಟೋಗಳನ್ನೂ ಕೂಡ ಮಿನಿ ವಿಮಾನಗಳ ಜತೆ ತೆಗೆಯುವುದರೊಂದಿಗೆ ಜನರ ಮೆಚ್ಚುಗೆ ಗಳಿಸಿದರು.
ನೀವು ನಿಲ್ಲಿ.. ನಾನು ಫೋಟೋ ತೆಗೆಯುತ್ತೇನೆ ಎಂದು ಜನರನ್ನು ಹುರಿದುಂಬಿಸುತ್ತಾ ಜಿಲ್ಲಾಧಿಕಾರಿಗಳು ತಮ್ಮದೇ ಫೋಟೋ ತೆಗೆಯುತ್ತಾ ಗಮನ ಸೆಳೆದರು.