ನಾಪೋಕ್ಲು ಮೇ 8 : ಕಕ್ಕುಂದ ಕಾಡು ವ್ಯಾಪ್ತಿಯಲ್ಲಿ ಕೊಡಗು ಬಲಿಜ ಸಮಾಜ ನೇತೃತ್ವದಲ್ಲಿ ಮನೆ ಮನೆ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಈ ಸಂದರ್ಭ ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬಡತನ ರೇಖೆಗಿಂತಾ ಕೆಳಗೆ ಇರುವ ಬಲಿಜ ಮತದಾರರೇ ಅಧಿಕವಾಗಿದ್ದು, ಹಲವರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಯಕ ಸಮಾಜ ಒಕ್ಕೂಟ ಮೂಲಕ 102 ಜಾತಿ ಜನಾಂಗಗಳ ಬೇಡಿಕೆ ಈಡೇರಿಕೆಗೂ ಹೋರಾಟ ನಡೆದಿದೆ, ನಾಪೋಕ್ಲುವಿನಲ್ಲಿ ಸುಮಾರು 25 ಬಲಿಜ ಕುಟುಂಬಗಳಿದ್ದು ಜಮ್ಮಾ ಹಿಡುವಳಿದಾರರೂ ಇದ್ದಾರೆ ಎಂದರು.
ಇದೇ ಸಂದರ್ಭ ಎಲ್ಲ ಬಲಿಜ ಜನಾಂಗದ ಮನೆ ಮನೆಗೆ ತೆರಳಿ ‘ಮತದಾನದ ದಿನ ಯಾರೂ ಮನೆಯಲ್ಲಿ ಉಳಿಯದೇ ಮತದಾನದಲ್ಲಿ ಭಾಗಿಯಾಗಿ ಎಂದು ಮನವಿ ಮಾಡಲಾಯಿತು.
ಕೊಡಗು ಬಲಿಜ ಸಮಾಜ ನಿರ್ದೇಶಕಿ ಟಿ.ವಿ.ಭವಾನಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.








