ಮಡಿಕೇರಿ ಮೇ 8 : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕೆಎಸ್‌ಆರ್‌ಟಿಸಿ ಬಸ್‍ಗಳ ಮುಖಾಂತರ ಕರೆದುಕೊಂಡು ಹೋಗುವ ಮಾರ್ಗದ ವಿವರ ಇಂತಿದೆ.
ಮಡಿಕೇರಿ ತಾಲ್ಲೂಕಿನ ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮೂರ್ನಾಡು ಮಾರ್ಗವಾಗಿ ಬಸ್ ಸಂಚರಿಸಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಟ್ಟಗೇರಿ-ನಾಪೋಕ್ಲು-ಕಕ್ಕಬೆ-ಪಾರಾಣೆ ಮಾರ್ಗವಾಗಿ ಬಸ್ ಸಂಚರಿಸಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿಗೆ ತಲುಪಲಿದೆ.
ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಹಾಕತ್ತೂರು-ಮರಗೋಡು-ಸಿದ್ದಾಪುರ-ಅಮ್ಮತ್ತಿ ಮಾರ್ಗವಾಗಿ ಬಸ್ ಸಂಚರಿಸಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಕರಿಕೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಭಾಗಮಂಡಲ-ಅಯ್ಯಂಗೇರಿ-ನೆಲಜಿ-ಬಲ್ಲಮಾವಟಿ-ಕಕ್ಕಬೆ-ಚೆಯ್ಯಂಡಾಣೆ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಜೂನಿಯರ್ ಕಾಲೇಜಿಗೆ ತಲುಪಲಿದೆ.
ಮಡಿಕೇರಿ ಕೋಟೆ ಆವರಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಕತ್ತಲೆಕಾಡು-ಕಡಗದಾಳು-ಚೆಟ್ಟಳ್ಳಿ-ಸಿದ್ದಾಪುರ-ಅಮ್ಮತ್ತಿ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಜೂನಿಯರ್ ಕಾಲೇಜು ತಲುಪಲಿದೆ.
ಸಂಪಾಜೆ ನಾಡ ಕಚೇರಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು-ಕಾಟಕೇರಿ-ಮಡಿಕೇರಿ-ಮೂರ್ನಾಡು ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಪೆರಾಜೆಯಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು-ಕಾಟಕೇರಿ-ಮಡಿಕೇರಿ-ಮೂರ್ನಾಡು ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಭಾಗಮಂಡಲ ನಾಡ ಕಚೇರಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಚೇರಂಬಾಣೆ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪಲಿದೆ.
ನಾಪೋಕ್ಲು ನಾಡ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಬೆಟ್ಟಗೇರಿ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪಲಿದೆ.
ಸಂಪಾಜೆ ನಾಡಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು-ಕಾಟಕೇರಿ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪಲಿದೆ.
ಪೆರಾಜೆಯಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಸಂಪಾಜೆ-ಮದೆನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪಲಿದೆ.
ಸೋಮವಾರಪೇಟೆ ಕೊಡ್ಲಿಪೇಟೆ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಶನಿವಾರಸಂತೆ-ಸೋಮವಾರಪೇಟೆ-ಮಾದಾಪುರ-ಸುಂಟಿಕೊಪ್ಪ-ಚೆಟ್ಟಳ್ಳಿ-ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿಗೆ ತಲುಪಲಿದೆ.
ಕುಶಾಲನಗರ ನಾಡಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಸೋಮವಾರಪೇಟೆ ತಾಲ್ಲೂಕು ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಮಾದಲಾಪುರ-ಕೂಡಿಗೆ-ಕುಶಾಲನಗರ-ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.
ಸೋಮವಾರಪೇಟೆ ಶನಿವಾರಸಂತೆ ನಾಡಕಚೇರಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಅಂಕನಳ್ಳಿ-ಆಲೂರು-ಸಿದ್ದಾಪುರ-ಕುಶಾಲನಗರ-ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಕುಶಾಲನಗರ ನಾಡಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಗುಡ್ಡೆಹೊಸೂರು-ನಂಜರಾಯಪಟ್ಟಣ-ನೆಲ್ಲಿಹುದಿಕೇರಿ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಕುಶಾಲನಗರದ ಶಿರಂಗಾಲದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಹೆಬ್ಬಾಲೆ-ಕುಶಾಲನಗರ-ಗುಡ್ಡೆಹೊಸೂರು-ನೆಲ್ಲಿಹುದಿಕೇರಿ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯ್ ಕಾಲೇಜು ತಲುಪುವುದು.
ಕುಶಾಲನಗರ ಪಟ್ಟಣ ಪಂಚಾಯಿತಿ ಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.
ಕುಶಾಲನಗರ ಶಿರಂಗಾಲದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಹೆಬ್ಬಾಲೆ-ಕುಶಾಲನಗರ-ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.
ಸೋಮವಾರಪೇಟೆ ತಾಲ್ಲೂಕು ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಮಾದಾಪುರ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪುವುದು. ಕುಶಾಲನಗರ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪುವುದು.
ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ನಾಡಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಸೋಮವಾರಪೇಟೆ-ಮಾದಾಪುರ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪುವುದು ಹಾಗೂ ಸೋಮವಾರಪೇಟೆ ತಾಲ್ಲೂಕು ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಮಾದಾಪುರ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪಲಿದೆ.
ವಿರಾಜಪೇಟೆ ತಾಲ್ಲೂಕು(ರೋಟರಿ) ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಮೂರ್ನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪುವುದು. ಪೊನ್ನಂಪೇಟೆ ತಾಲ್ಲೂಕು ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಹುದಿಕೇರಿ-ಗೋಣಿಕೊಪ್ಪ-ವಿರಾಜಪೇಟೆ-ಮೂರ್ನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪುವುದು.
ಕುಟ್ಟ ಬಸ್ ನಿಲ್ದಾನದಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಶ್ರೀಮಂಗಲ-ವಿರಾಜಪೇಟೆ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‍ಗೆ ತಲುಪುವುದು.
ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿಯಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಟು ಬಾಳೆಲೆ-ಪೊನ್ನಪ್ಪಸಂತೆ-ಮಾಯಾಮುಡಿ-ಗೋಣಿಕೊಪ್ಪ-ಪಾಲಿಬೆಟ್ಟ-ಸಿದ್ದಾಪುರ-ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ ಸಂತ ಜೋಸಫರ ಕಾನ್ವೆಂಟ್ ತಲುಪುವುದು.
ಪೊನ್ನಂಪೇಟೆ ನಾಡ ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಗೋಣಿಕೊಪ್ಪ-ಅಮ್ಮತ್ತಿ-ಸಿದ್ದಾಪುರ-ಮರಗೋಡು-ಹಾಕತ್ತೂರು ಮಾರ್ಗವಾಗಿ ಮಡಿಕೇರಿ ಸಂತ ಜೋಸಫರ ಕಾನ್ವೆಂಟ್ ತಲುಪುವುದು.
ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ವಿರಾಜಪೇಟೆ-ಮೂರ್ನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸಫರ ಕಾನ್ವೆಂಟ್ ತಲುಪುವುದು.
ತಿತಿಮತಿ ಜಂಕ್ಷನ್‍ನಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಡಲಿದ್ದು, ಗೋಣಿಕೊಪ್ಪಲು-ಅಮ್ಮತ್ತಿ-ಸಿದ್ದಾಪುರ-ನೆಲ್ಯಹುದಿಕೇರಿ-ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ ಸಂತ ಜೋಸಫರ ಕಾನ್ವೆಂಟ್ ತಲುಪುವುದು.
ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಹುದಿಕೇರಿ-ಗೋಣಿಕೊಪ್ಪ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.
ಕುಟ್ಟ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಕುಟ್ಟ-ಕಾನೂರು-ಪೊನ್ನಂಪೇಟೆ-ಗೋಣಿಕೊಪ್ಪ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.
ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಟು ಬಾಳೆಲೆ-ಪೊನ್ನಪ್ಪಸಂತೆ-ಮಾಯಾಮುಡಿ-ಗೋಣಿಕೊಪ್ಪ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.
ಪೊನ್ನಂಪೇಟೆ ನಾಡ ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಗೋಣಿಕೊಪ್ಪ-ಪಾಲಿಬೆಟ್ಟ-ಅಮ್ಮತ್ತಿ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.
ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಗೋಣಿಕೊಪ್ಪ-ಪಾಲಿಬೆಟ್ಟ-ಅಮ್ಮತ್ತಿ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.
ತಿತಿಮತಿ ಜಂಕ್ಷನ್‍ನಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಟು ಗೋಣಿಕೊಪ್ಪಲು-ಬಿಟ್ಟಂಗಾಲ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪುವುದು.