ಮಡಿಕೇರಿ ಮೇ 8 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಶೇ.93.19 ಫಲಿತಾಂಶದೊಂದಿಗೆ ರಾಜ್ಯಕ್ಕೆ 9ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಜಿಲ್ಲೆ ರಾಜ್ಯಕ್ಕೆ 11 ಸ್ಥಾನದಲ್ಲಿತ್ತು.
ಜಿಲ್ಲೆಗೆ ಪ್ರಥಮ-ಮಡಿಕೇರಿಯ ಸಂತ ಮೈಕೆಲರ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿನಿ ಮರ್ಲಿನ್ ಲಾಸ್ರೆಡೋ, ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ವೈಷ್ಣವಿ ಅವರುಗಳು 620(ಶೇ.99.20) ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮರಾಗಿದ್ದಾರೆ. ಸೋಮವಾರಪೇಟೆಯ ಫಾತಿಮಾ ಕಾನ್ವೆಂಟ್‍ನ ಶ್ರೀವಿದ್ಯಾ ಡಿ.619(ಶೇ.99.04) ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೂಡಿಗೆಯ ಏಂಜೆಲಾ ವಿದ್ಯಾನಿಕೇತನದ ಚೇತನ್ ಎಸ್.ಎನ್. ಮತ್ತು ಗೋಣಿಕೊಪ್ಪಲು ಲಯನ್ಸ್ ಪ್ರೌಢಶಾಲೆಯ ದೀತ್ಯಾ ದೇಚಮ್ಮ ಎಂ.ವಿ. ಅವರುಗಳು 618 (ಶೇ.98.88) ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
5597 ವಿದ್ಯಾರ್ಥಗಳು ತೇರ್ಗಡೆ- ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಜಿಲ್ಲೆಯ 6026 ವಿದ್ಯಾರ್ಥಿಗಳಲ್ಲಿ 5597 ಮಂದಿ ಉತ್ತೀರ್ಣಗಾಗಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 1769 ವಿದ್ಯಾರ್ಥಿಗಳಲ್ಲಿ 1608 ಮಂದಿ ತೇರ್ಗಡೆಯಾಗಿ ಶೇ.90.90 ಫಲಿತಾಂಶ ಬಂದಿದ್ದರೆ, ಸೋಮವಾರಪೇಟೆ ತಾಲ್ಲೂಕಿನ 2383 ವಿದ್ಯಾರ್ಥಿಗಳಲ್ಲಿ 2270 ಮಂದಿ ಉತ್ತೀರ್ಣರಾಗಿ ಶೇ.95.25 ಫಲಿತಾಂಶ ಬಂದಿದೆ. ವಿರಾಜಪೇಟೆ ತಾಲ್ಲೂಕಿನ 1874 ವಿದ್ಯಾರ್ಥಿಗಳಲ್ಲಿ 1719 ಮಂದಿ ತೇರ್ಗಡೆಯಾಗಿದ್ದು ಶೇ.91.73 ಫಲಿತಾಂಶ ಲಭ್ಯವಾಗಿದೆ.
ಶೇ.100 ಫಲಿತಾಂಶ- ಕೊಡಗು ಜಿಲ್ಲೆಯಲ್ಲಿ 61 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಮಡಿಕೇರಿ ತಾಲ್ಲೂಕಿನ 15, ಸೋಮವಾರಪೇಟೆ ತಾಲ್ಲೂಕಿನ 29 ಮತ್ತು ವಿರಾಜಪೇಟೆ ತಾಲ್ಲೂಕಿನ 13 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ.
ಅಗತ್ಯ ಕ್ರಮಗಳಿಂದ ಫಲಿತಾಂಶ ಹೆಚ್ಚಳ- ಡಿಡಿಪಿಐ ರಂಗಧಾಮಯ್ಯ ಅವರು, ಈ ಬಾರಿ ಫಲಿತಾಂಶ ಉತ್ತಮ ಗೊಳ್ಳುವುದಕ್ಕೆ ಶಿಕ್ಷಕರ ಬೋಧನೆಗೆ ಮತ್ತು ವಿದ್ಯಾರ್ತೀಗಳ ಶಿಕ್ಷಣಕೆಕ ಕೈಗೊಂಡ ಅಗತ್ಯ ಕ್ರಮಗಳು ಕಾರಣವಾಗಿದೆಯೆಂದು ತಿಳಿಸಿದರು.
ಶಿಕ್ಷಕರಿಗೆ ಪುನಶ್ಚೇತನ ತರಬೇತಿ ನೀಡಿ ಬೋಧನಾ ಕ್ರಮಗಳ ಬಗ್ಗೆ ಮನವರಿಕೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗೆ, ಪರೀಕ್ಷಾ ಸಿದ್ಧತೆಯ ಕ್ರಮಗಳ ಬಗ್ಗೆ ಅಗತ್ಯ ತರಬೇತಿಯನ್ನು ಜಿಲ್ಲಾಧಿಖಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ನೀಡಿದ ಪರಿಣಾಮ ಫಲಿತಾಂಶ ಉತ್ತಮಗೊಂಡಿರುವುದಾಗಿ ಹೇಳಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*