ಮಡಿಕೇರಿ ಮೇ 8 : ಇತ್ತೀಚೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಅವರ ಪುತ್ರ, ಸೋಮವಾರಪೇಟೆ ತಾ.ಪಂ ಮಾಜಿ ಸದಸ್ಯ ಕೆ.ಐ.ಮೊಹಮ್ಮದ್ ರಫೀಕ್ ಅವರಿಗೆ ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ನೀಡಿದ ಆದೇಶ ಪತ್ರವನ್ನು ಪಕ್ಷದ ಮುಖಂಡ ಹೆಚ್.ಡಿ.ರೇವಣ್ಣ ಅವರ ಬಳಿಯಿಂದ ಮೊಹಮ್ಮದ್ ರಫೀಕ್ ಪಡೆದುಕೊಂಡರು. ಕಾಂಗ್ರೆಸ್ ಪಕ್ಷ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು, ಆದರೆ ಜಾತ್ಯತೀತ ಜನತಾದಳ ನನಗೆ ಈ ದೊಡ್ಡ ಹುದ್ದೆಯನ್ನು ನೀಡಿದ್ದು, ಸಂಘಟನೆಯ ಮೂಲಕ ಪಕ್ಷ ನಿಷ್ಠೆಯನ್ನು ಪ್ರದರ್ಶಿಸುವುದಾಗಿ ಮೊಹಮ್ಮದ್ ರಫೀಕ್ ಹೇಳಿದರು.










