ಸುಂಟಿಕೊಪ್ಪ ಮೇ 9 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಪ್ರೌಢಶಾಲೆಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಮಕ್ಕಳು ಪೋಷಕರು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಮತ್ತು ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 74 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ್ತ ಶ್ರೇಣಿಯಲ್ಲಿ 39 ಮಕ್ಕಳು ಮತ್ತು ಪ್ರಥಮ ದರ್ಜೆಯಲ್ಲಿ 35 ಮಕ್ಕಳು ಉತ್ತೀರ್ಣರಾಗಿದ್ದು, ಈ ಪೈಕಿ ಎಂ.ವಿ. ಶ್ರೀ ಲಕ್ಷ್ಮಿ 604 ಅಂಕಗಳಿಸಿ ಶೇ.96.64 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ದ್ವಿತೀಯ ಸ್ಥಾನದಲ್ಲಿ ಕೆ.ಎಸ್.ತಮ್ಮಯ್ಯ ಶೇ.96.32 ಅಂಕಗಳನ್ನು ಗಳಿಸಿದ್ದಾರೆ, ಯಶಸ್ವಿನಿ ಶೆಟ್ಟಿ, ಅನನ್ಯ ಅರವಿಂದ್ ಮತ್ತು ನೇಹಾ ಅವರುಗಳು ಶೇ.95.02 ಅಂಕಗಳೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಸಂತಮೇರಿ 90 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ 11 ಮಂದಿ ಬಾಲಕರು 17 ಮಂದಿ ಬಾಲಕಿಯರು ಒಟ್ಟು 28 ಮಂದಿ ತೇರ್ಗಡೆಗೊಂಡರೇ, ಪ್ರಥಮ ಶ್ರೇಣಿಯಲ್ಲಿ 25 ಮಂದಿ ಬಾಲಕರು, 25 ಮಂದಿ 32 ಮಂದಿ, ದ್ವಿತೀಯ ಶ್ರೇಣಿಯಲ್ಲಿ ಬಾಲಕರು 3 ಮಂದಿ 1 ಬಾಲಕಿ ತೇರ್ಗಡೆಗೊಂಡಿದ್ದು ಈ ಪೈಕಿ ಫಾತೀಮಾ ರಿಶಾನ 604 ಶೇ. 96.64, ಎಂ.ಎಸ್.ಮಾನ್ಯಶ್ರೀ 94.88, ವಿ.ಆರ್.ಶ್ರೇಯಾ 94.88, ಸಂಜನ ಸಾಲಿಯಾನ ಶೇ.92.64 ಪಡೆದುಕೊಂಡಿದ್ದಾರೆ.
ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ 45 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 43 ಮಕ್ಕಳು ಉತ್ತೀರ್ಣಗೊಂಡು ಶೇ.95.5 ಫಲಿತಾಂಶವನ್ನು ಪಡೆದುಕೊಂಡಿದೆ.
ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ 30 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 2 ಮಂದಿ ಅತ್ಯುನ್ನತ್ತ ಶ್ರೇಣಿಯನ್ನು ಪಡೆದಿಕೊಂಡರೆ 25 ಮಂದಿ ಮಕ್ಕಳು ಉತ್ತೀರ್ಣರಾಗಿದ್ದಾರೆ.
7ನೇ ಹೊಸಕೋಟೆ ಸರಕಾರಿ ಪ್ರಾಢಶಾಲೆ ಹತ್ತನೇ ತರಗತಿಯಲ್ಲಿ 21 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆಯನ್ನು ಎದುರಿಸಿದ ಎಲ್ಲಾರೂ ಉತ್ತೀರ್ಣಗೊಂಡಿದ್ದು, ಶೇ.100 ಫಲಿತಾಂಶ ಪಡೆದುಕೊಂಡಿದ್ದು 2 ವಿದ್ಯಾರ್ಥಿಗಳು ಅತ್ಯುನ್ನತ್ತ ಶ್ರೇಣಿಯಲ್ಲಿ 2 ಮಕ್ಕಳು ಪ್ರಥಮ ದರ್ಜೆಯಲ್ಲಿ 17 ಮಂದಿ, ದ್ವಿತೀಯ ದರ್ಜೆಯಲ್ಲಿ ಓರ್ವ ವಿದ್ಯಾರ್ಥಿ, ತೃತೀಯ ದರ್ಜೆಯಲ್ಲಿ ಓರ್ವ ವಿದ್ಯಾರ್ಥಿನಿ ತೇರ್ಗಡೆಗೊಂಡಿದ್ದಾರೆ.









