ಸುಂಟಿಕೊಪ್ಪ ಮೇ 9 : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವ ಅಂಗವಾಗಿ ಚಿಕ್ಕಮಗಳೂರು ಧರ್ಮಕ್ಷೇತ್ರದ ವಂ. ಗುರುಗಳಾದ ವಿನಯ್ ಕುಮಾರ್ ವಿಶೇಷ ಪ್ರಭೋದನೆ ಮತ್ತು ಬಲಿಪೂಜೆಯನ್ನು ಸಮರ್ಪಿಸಿದರು. ಧ್ವಜಾರೋಹಣ ನೇರವೇರಿಸುವ ಮೂಲಕ ಬಲಿಪೂಜೆಯನ್ನು ಅರ್ಪಿಸುವ ಮೂಲಕ ದೇವಾಲಯದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾಧಿಗಳು ಸಲ್ಲಿಸಿದರು.
ಸಂಜೆ ಸಂತ ಅಂತೋಣಿಯವರ ದೇವಾಲಯದಲ್ಲಿ ಹಬ್ಬದ ಅಡಂಬರ ಗಾಯನ ಬಲಿಪೂಜೆ ಮತ್ತು ಪರಮಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಶೇಷ್ಠ ಗುರುಗಳಾದ ರೇವರೆಂಡ್ ಅಲ್ಪ್ರೆಡ್ ಜಾನ್ ಮೆಂಡಾನ್ಸಾ, ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಫಾಧರ್ ದೀಪಕ್, ಆಗಮಿಸಿದ್ದ ಧರ್ಮಗುರುಗಳು ಒಗ್ಗೂಡಿ ನೇರವೇರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ಹೂಗಳು ಹಾಗೂ ಲೈಂಟಿಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಾಗಳಿಂದ ಅಲಂಕಾರಿಸಲಾಗಿತ್ತು.
ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ, 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸುನಿಲ್, ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ಫಾ. ಮಾರ್ಟಿನ್, ಮಡಿಕೇರಿ ಸಂತ ಮೈಕಲರ ದೇವಾಲಯದ ಸಹಾಯಕ ಗುರುಗಳಾದ ಫಾ. ನವೀನ್ ಬಾಲಕುಮರ್, ಜಾನ್‍ಪೌಲ್, ಅಲ್ಪೆರ್ಡ್ ಪಿಂಠೋ, ಪಾಧರ್ ರೇಗನ್, ಸಂತೋಷ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ಅರುಳ್ ಸೇಲ್ವಕುಮಾರ್, ಮತ್ತಿತರರು ಹಾಜರಿದ್ದರು.
ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಮೂರ್ತಿಯನ್ನು ಇರಿಸಿ ವಾದ್ಯಗೋಷ್ಠಿ, ಕೇರಳದ ಚಂಡೆಮೇಳದೊಂದಿಗೆ ಧರ್ಮಗುರುಗಳು, ಕ್ರೈಸ್ತ ಸನ್ಯಾಸಿನಿಯರು ಮತ್ತು ಸುಂಟಿಕೊಪ್ಪ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಗಾಯನಗಳೊಂದಿಗೆ ಹಾಡುತ್ತ ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು.